ಕೋತಿಗಳ ಕಿತಾಪತಿಗೆ ದಂಗಾದ ಯುವತಿ; ಮಂಗಗಳ ಅಸಹಜ ವರ್ತನೆ ವೈರಲ್

ನಾಲಗೆ ರುಚಿಯೆಂಬುದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಇರುತ್ತವೆ ಹಾಗು ಅವುಗಳು ತಮಗಿಷ್ಟವಾದುದನ್ನು ಸೇವಿಸುವ ಅಲಿಖಿತ ಹಕ್ಕನ್ನು ಚಲಾಯಿಸುತ್ತಿವೆ. ಹೀಗೆ ಹೇಳಲು ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವೀಡಿಯೋ.

ಜನರ ಕೈಯ್ಯಲ್ಲಿ ಚೀಲಗಳನ್ನು ಕಂಡರೆ ಸಾಮಾನ್ಯವಾಗಿ ಕಸಿಯಲು ಬರುವ ಮಂಗಗಳು ಅದರಲ್ಲಿ ತಿನ್ನಲು ಏನಾದರೂ ಸಿಗುತ್ತದೆಯೇ ಎಂದು ಶೋಧಿಸುತ್ತವೆ. ಕೆಲವೊಮ್ಮೆ ಜನ ಖುದ್ದಾಗಿ ತಿಂಡಿ ಕೊಟ್ಟರೆ ನಾ ಮುಂದು ತಾ ಮುಂದು ಎಂದು ಜಗಳಕ್ಕೆ ಬಿದ್ದು ಕಬಳಿಸುತ್ತವೆ.

ಅದರ ತದ್ವಿರುದ್ಧವಾದ ಘಟನೆಯೊಂದು ನಡೆದಿದ್ದು, ಮಂಗಗಳಿಗೆ ಬಿಸ್ಕೆಟ್ ನೀಡಲು ಹೋದ ಯುವತಿ ಕಂಗಾಲದರೆ, ಉಳಿದವರು ಹೊಟ್ಟೆ ಹುಣ್ಣಾಗುವಂತೆ ನಕ್ಕು ಅದರ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿರುವ ಕಪಿಗಳಿಗೆ ಯುವತಿಯೊಬ್ಬಳು ಬಿಸ್ಕೆಟ್ ಕೊಡುತ್ತಿದ್ದು, ಕೆಲ ಮಂಗಗಳು ಆಕೆಯನ್ನು ನಿರ್ಲಕ್ಷಿಸಿ ಮುಂದುವರೆಯುತ್ತವೆ. ನಂತರ ಬಂದ ಒಂದೆರಡು ಕೋತಿಗಳು ಅವಳ ಕೈಯ್ಯಿಂದ ತಿಂಡಿಯನ್ನು ಸ್ವೀಕರಿಸಿದವಾದರೂ ಅದನ್ನು ಮೂಸಿ ನೋಡಿ ಮರುಕ್ಷಣವೇ ನೆಲಕ್ಕೆಸೆದು ಸಾಗಿದ್ದಾವೆ.

ಇದನ್ನು ನೋಡಿ ಯುವತಿ ಹಾಗು ಅಲ್ಲಿದ್ದವರು ಆಶ್ಚರ್ಯ ಪಟ್ಟರೆ, ಜನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾದುತ್ತಿರುವ ಈ ವೀಡಿಯೋಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿ ʼಮುದ್ದಾದ ಅವಮಾನʼವೆನ್ನುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *