ಕೋರ್ಟ್​​​ ವಿಚಾರಣೆ ವೇಳೆ ನ್ಯಾಯಧೀಶೆ ಮೇಲೆ ದಾಳಿ ಮಾಡಿದ ಕೈದಿ

ಅಮೆರಿಕ: ನೆವಾಡಾ ಕೋರ್ಟ್‌ ರೂಂನಲ್ಲಿ ಬುಧವಾರ (ಜ.3)ದಂದು ಅಪರಾಧಿಯೊಬ್ಬ ನ್ಯಾಯಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​​ ಆಗಿದೆ. ಈ ವ್ಯಕ್ತಿಯನ್ನು 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂದು ಗುರುತಿಸಲಾಗಿದೆ.

ಬುಧವಾರ ಬೆಳಿಗ್ಗೆ ಅಪರಾಧಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ. ಆತನ ಮೇಲಿರುವ ಆರೋಪದ ಬಗ್ಗೆ ವಿಚಾರಣೆ ನಡೆಸಬೇಕಾದರೆ ಈ ಘಟನೆ ನಡೆದಿದೆ. ಈ ಅಪರಾಧಿ ಮೇಲೆ ಅನೇಕ ಪ್ರಕರಣಗಳಿದ್ದು, ಈಗಾಗಲೇ ಶಿಕ್ಷೆಯನ್ನು ಅನುಭವಿಸಿದ್ದಾನೆ.

ಆದರೆ ವಿಚಾರಣೆ ಸಮಯದಲ್ಲಿ ನ್ಯಾಯಧೀಶರ ಟೆಬಲ್​​ ಮೇಲೆ ಹಾರಿ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಮೇಲೆ ಹಲ್ಲೆ ನಡೆಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿಯೋಬ್ರಾ ರೆಡ್ಡೆನ್ ನ್ಯಾಯಧೀಶರು ಇರುವ ಟೆಬಲ್​​​​ ಮೇಲೆ ಹಾರಿದ ವೇಳೆ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರು ಕೆಳಗೆ ಬಿದ್ದು ತಲೆ ಗಾಯಗಳಾಗಿವೆ, ಇನ್ನು ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರನ್ನು ಕಾಪಾಡಲು ಬಂದ ಕೋರ್ಟ್​​​​​​ ಮಾರ್ಷಲ್​​​​ಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *