ಕೌನ್‌ ಬನೇಗಾ ಕರೋಡ್ಪತಿ 15 ನೇ ಸೀಸನ್‌ ನ ಅದೃಷ್ಟಶಾಲಿ ಯಾರು ಗೊತ್ತಾ

ನವದೆಹಲಿ: ‘ಕೌನ್ ಬನೇಗಾ ಕರೋಡ್ಪತಿ’ 15 ನೇ ಸೀಸನ್ ನ ಮೊದಲ ಕೋಟ್ಯಾಧಿಪತಿ ಪಂಜಾಬ್‌ನಿಂದ ಜಸ್ಕರನ್ ಸಿಂಗ್ ಅವರಿಗೆ ಬಹುಮಾನದ ಮೊತ್ತ ಒದಗಿಸಲು ವೇದಿಕೆ ಸಿದ್ಧವಾಗಿದೆ.

ಸೋನಿ ಟಿವಿ ಸೋಶಿಯಲ್ ಮೀಡಿಯಾ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ ಮೆಗಾಸ್ಟಾರ್ ಮತ್ತು ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅವರು ಜಸ್ಕರನ್ 1 ಕೋಟಿ ಮೊತ್ತವನ್ನು ಗೆದ್ದಿದ್ದಾರೆ ಎಂದು ಘೋಷಿಸಿದ್ದಾರೆ.

ಜಸ್ಕರನ್ ಪಂಜಾಬ್‌ನ ಖಲ್ರಾ ಎಂಬ ಸಣ್ಣ ಹಳ್ಳಿಯವರಾಗಿದ್ದು ಜಸ್ಕರನ್ ಅವರ ತಂದೆ ಕ್ಯಾಟರರ್ ಆಗಿ ಕೆಲಸ ಮಾಡುತ್ತಿದ್ದಾರೆ, ಅವರ ಅಜ್ಜ ‘ಚೋಲೆ ಭತುರ’ ಮಾರಾಟ ಮಾಡುತ್ತಾರೆ. ಅಜ್ಜಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಜಸ್ಕರನ್ ತಮ್ಮ ಹಳ್ಳಿಯಲ್ಲಿ ಕೆಲವೇ ಜನರು ಪದವಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಯುಪಿಎಸ್‌ಗೆ ತಯಾರಿ ನಡೆಸುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *