ಖಾಲಿ ಹಾಳೆಯ ಮೇಲೆ ಸಹಿ ಮಾಡಲು ಒತ್ತಾಯ; ಸಂಸತ್ ದಾಳಿಯ ಆರೋಪಿಗಳಿಂದ ಆರೋಪ

ನವದೆಹಲಿ: ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ಲೋಪದಲ್ಲಿ ವಿರೋಧ ಪಕ್ಷಗಳೊಂದಿಗೆ ಸೇರಿರುವುದಾಗಿ ಒಪ್ಪೊಕೊಂಡು ಖಾಲಿ ಹಾಳೆಯ ಮೇಲೆ ಸಹಿ ಮಾಡುವಂತೆ ದೆಹಲಿ ಪೋಲೀಸರು ಒತ್ತಾಯಿಸಿದ್ದಾರೆಂದು ಬಂಧನಕ್ಕೊಳಗಾದ ಆರು ಜನರಲ್ಲಿ ಐವರು ಆರೋಪಿಸಿದ್ದಾರೆ.

ಡಿ.೧೩ರ ಕಲಾಪದ ವೇಳೆ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಸ್ಮೋಕ್ ಗ್ಯಾಸ್ ಬಳಸಿ ಧಾಂದಲೆ ಎಬ್ಬಿಸಿದ್ದ ಆರೋಪಿಗಳು ಹೆಚ್ಚುವರಿ ಸೆಷನ್ ಕೋರ್ಟ್ ನ ನ್ಯಾಯಾಧೀಶ ಹರ್ದೀಪ್ ಕೌರ್ ಎದುರು ಈ ಹೇಳಿಕೆ ನೀಡಿದ್ದಾರೆ.

ʼ೭೦ ಪುಟಗಳ ಖಾಲಿ ಹಾಳೆಯ ಮೇಲೆ ಸಹಿ ಮಾಡುವಂತೆ ಒತ್ತಡ ಹೇರಲಾಯಿತು. ವಿಚಾರಣೆಯ ವೇಳೆ ವಿದ್ಯುತ್ ಶಾಕ್ ನಂತಹ ಹಿಂಸೆ ನೀಡಿದ್ದಾರೆʼ ಎಂದು ಆರೋಪಿಗಳಾದ ಡಿ.ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಜಾ, ಅಮೋಲ್ ಶಿಂದೆ ಮತ್ತು ಮಹೇಶ್ ಕುಮಾವತ್ ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಹಾಗು ಅವುಗಳ ಮುಖಂಡರೊಡನೆ ಒಡನಾಟ ಹೊಂದಿರುವುದಾಗಿ ಬರೆದುಕೊಡುವಂತೆ ಇಬ್ಬರು ಆರೋಪಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ನ್ಯಾಯಾಲಕ್ಕೆ ಸಲ್ಲಿಸಲಾದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿಚಾರಣೆಯ ವೇಳೆ ಮೊಬೈಲ್, ಸಿಮ್, ಬೆರಳಚ್ಚು, ಸಾಮಾಜಿಕ ಜಾಲತಾಣಗಳ ಹಾಗು ಇಮೇಲ್‌ ಪಾಸ್‌ವರ್ಡ್ ಇತ್ಯಾದಿಗಳನ್ನು ಬಲವಂತದಿಂದ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *