ಖ್ಯಾತ ನಟ ವಿಜಯ್‌ ಆಯಂಟೊನಿ ಪುತ್ರಿ ಆತ್ಮಹತ್ಯೆಗೆ ಶರಣು!

ಚೆನ್ನೈ: ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್‌ ಆಯಂಟೊನಿ ಅವರ 16ರ ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ನಿರ್ಮಾಪಕರಾಗಿಯೂ ಹೆಸರು ಮಾಡಿರುವ ವಿಜಯ್‌ ಅವರ ಮಗಳು ಮೀರಾ ಚೆನ್ನೈಯ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಇಂದು ಮುಂಜಾನೆ ಎದ್ದು ನೋಡುವಾಗ ಚೆನ್ನೈಯ ನಿವಾಸದಲ್ಲಿ ಆಕೆ ನೇಣು ಬಿಗಿದುಕೊಂಡಿದ್ದು ಕಂಡುಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ.

ಮೀರಾ ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯಿಂದ ಬಳಲಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.

Font Awesome Icons

Leave a Reply

Your email address will not be published. Required fields are marked *