ಗಜಪಡೆ ಪೋಸ್ಟ್‌ ವಿರುದ್ಧ ಖಡಕ್‌ ಪ್ರತಿಕ್ರಿಯೆ ಕೊಟ್ಟ ನಟ ಜಗ್ಗೇಶ್‌

ಬೆಂಗಳೂರು:   ಆರ್‌ಸಿಬಿಯ ಮೂರು ಸೋಲಿಗೆ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಕಾರಣ ಎನ್ನುವಂತೆ ಕೀಳುಮಟ್ಟದಲ್ಲಿ ಗಜಪಡೆ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು ಈ ಬೆನ್ನಲ್ಲೇ ಈಗ ನವರಸ ನಾಯಕ ಜಗ್ಗೇಶ್ ಅವರು ಕಿಡಿಗೇಡಿಗಳಿಗೆ ಖಡಕ್‌ಕ್ಕಾಗಿ ಉತ್ತರ ನೀಡಿದ್ದಾರೆ.

ʻಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗು ತಾಯಿ ಇರಬೇಕು ಹಾಗು ತಾಯಿಬೆಲೆ ಗೊತ್ತಿರಬೇಕು.ಒಂದುವೇಳೆ ತಾಯಿ ಹೆಣ್ಣು ಗೌರವ ಇಲ್ಲ ಎಂದರೆ ಕಂಡಿತ ಅಂಥವರು ಮನುಗುಲಕ್ಕೆ ಅನರ್ಹ! ಪುನೀತನ ಮಡದಿ ಅನಾಥಳಲ್ಲಾ ತನ್ನಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ.ಹೆಣ್ಣುಕುಲಕ್ಕೆ ನೋವುಕೊಟ್ಟವ ಉದ್ದಾರ ಆದಾಗ ಇತಿಹಾಸವಿಲ್ಲಾʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದಾರೆ.

Font Awesome Icons

Leave a Reply

Your email address will not be published. Required fields are marked *