ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚನೆ

ಉಡುಪಿ: ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಾರ್ ಎಂಬವರು ಮಾರ್ಚ್ 14ರಂದು ತನ್ನ ವ್ಯವಹಾರದ 6000ರೂ. ಹಣವನ್ನು ಗೂಗಲ್ ಪೇನಲ್ಲಿ ಕೈತಪ್ಪಿನಿಂದ ಬೇರೊಂದು ನಂಬರಿಗೆ ಕಳುಹಿಸಿದ್ದು, ಈ ಸಂಬಂಧ ಗೂಗಲ್‌ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದರು. ಹಣವನ್ನು ಹಿಂದಕ್ಕೆ ಪಡೆಯಲು 5 ಡಿಜಿಟ್‌ಗಳ ಸಂಖ್ಯೆಗಳ ಆ್ಯಪ್‌ನಲ್ಲಿ ನಮೂದಿಸುವಂತೆ ತಿಳಿಸಿದ್ದರು. ಅದರಂತೆ ನಂಬರ್ ನಮೂದಿಸಿದ ಬಳಿಕ ಇವರ ಖಾತೆಯಿಂದ 75,040ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Font Awesome Icons

Leave a Reply

Your email address will not be published. Required fields are marked *