ಗೃಹರಕ್ಷಕದಳದ ಪಾರ್ವತಿ ಎಫ್ ಸಂಭೋಜಿ ಅವರಿಗೆ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ

ಧಾರವಾಡ : ಧಾರವಾಡ ಘಟಕದ ಗೃಹರಕ್ಷಕದಳದ ಇಲಾಖೆಯಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಪಾರ್ವತಿ ಎಫ್ ಸಂಭೋಜಿಯವರಿಗೆ ಮುಖ್ಯಮಂತ್ರಿ 2023 ನೇ ಸಾಲಿನ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.

ಈ ಮೂಲಕ ಪಾರ್ವತಿಯವರು ಜಿಲ್ಲೆಗೆ ಹಾಗು ಗೃಹರಕ್ಷಕದಳದ ಇಲಾಖೆಗೆ ಕೀರ್ತಿಯನ್ನು ತಂದುಕೊಟ್ಟಿದಕ್ಕಾಗಿ ಧಾರವಾಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಸುನೀಲ್ ಸರೂರ, ಗೃಹರಕ್ಷಕ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *