ಗೆದ್ದು ಬೀಗಲು​ ತುದಿಗಾಲಲ್ಲಿ ನಿಂತ ಆರ್​​ಸಿಬಿ ವುಮೆನ್ಸ್​ ಟೀಮ್ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ದೆಹಲಿ:  2ನೇ ಸೀಸನ್​ನ ಮಹಿಳಾ ಪ್ರೀಮಿಯರ್​ ಲೀಗ್​ ಫೈನಲ್​ ಫೈಟ್​​ಗೆ ಕೌಂಟ್​​ಡೌನ್ ಶುರುವಾಗಿದೆ. ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆಯೋ ಅಂತಿಮ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ – ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗಲಿವೆ. ಚೊಚ್ಚಲ ಟ್ರೋಫಿ ಗೆಲುವಿನ ಕನಸಿನಲ್ಲಿ ಉಭಯ ತಂಡಗಳಿವೆ.

ಈ ಸಲ ಕಪ್​ ನಮ್ದೇ.. 16 ವರ್ಷಗಳಿಂದ ಈ ಮಾತನ್ನ ಆರ್​​ಸಿಬಿ ಫ್ಯಾನ್ಸ್​ ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಕನಸು ಕನಸಾಗೇ ಉಳಿದಿದೆ. ಇದೀಗ ಆರ್​​ಸಿಬಿ ವನಿತೆಯರ ತಂಡ ಆ ಕನಸನ್ನ ನನಸು ಮಾಡುವತ್ತ ಹೆಜ್ಜೆ ಇಟ್ಟಿದೆ. ಇಂದು ನಡೆಯೋ ಫೈನಲ್​​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಮಣ್ಣು ಮುಕ್ಕಿಸಿ ಟ್ರೋಫಿ ಎತ್ತಿ ಹಿಡಿಯಲು ಸ್ಮೃತಿ ಮಂದಾನ ಪಡೆ ಸಜ್ಜಾಗಿದೆ.

ಐಪಿಎಲ್​ ಆರಂಭವಾಗಿ 16 ಸೀಸನ್​ ಕಳೆದಿವೆ. ಆದ್ರೆ, ಆರ್​​ಸಿಬಿ, ಡೆಲ್ಲಿ ಎರಡೂ ತಂಡಗಳು ಈವರೆಗೆ ಐಪಿಎಲ್​ ಟ್ರೋಫಿ ಗೆದ್ದಿಲ್ಲ. ಇದೀಗ ಮಹಿಳಾ ಪ್ರೀಮಿಯರ್​​ ಲೀಗ್​ನಲ್ಲಿ​ ಎರಡೂ ತಂಡಗಳು ಫೈನಲ್​ ಫೈಟ್​ ನಡೆಸಲಿವೆ. ಇದ್ರಲ್ಲಿ ಗೆದ್ದ ತಂಡ ಇತಿಹಾಸ ಸೃಷ್ಟಿಸಲಿದೆ.

ಆರ್​ಸಿಬಿ ಪುರುಷರ ತಂಡ ಈವರೆಗೆ ಟ್ರೋಫಿ ಗೆದ್ದಿಲ್ಲ. ಇದೀಗ ಮಹಿಳಾ ತಂಡ ಪ್ರಶಸ್ತಿ ಮೇಲೆ ಕಣ್ಣಿದ್ದು ಇತಿಹಾಸ ಸೃಷ್ಟಿಸುತ್ತ ನೋಡಬೇಕಿದೆ. ಇನ್ನು ಮಹಿಳಾ ಪ್ರೀಮಿಯರ್ ಲೀಗ್ 2023 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಆಗ ಪ್ರಶಸ್ತಿ ಗೆದ್ದಿದ್ದಕ್ಕೆ 6 ಕೋಟಿ ರೂ. ನೀಡಲಾಗಿತ್ತು. ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ 3 ಕೋಟಿ ರೂಪಾಯಿ ಬಹುಮಾನವನ್ನು ಪಡೆದುಕೊಂಡಿತ್ತು. ಆದರೆ, ಇಲ್ಲಿಯವರೆಗೆ ಮಹಿಳಾ ಪ್ರೀಮಿಯರ್ ಲೀಗ್‌ 2024ರ ಬಹುಮಾನದ ಮೊತ್ತದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಬಾರಿಯೂ ಡಬ್ಲ್ಯುಪಿಎಲ್ ಗೆದ್ದ ತಂಡಕ್ಕೆ 6 ಕೋಟಿ ರೂ., ರನ್ನರ್ಸ್ ಅಪ್ ತಂಡಕ್ಕೆ 3 ಕೋಟಿ ರೂ. ಬಹುಮಾನ ಸಿಗುವ ನಿರೀಕ್ಷೆ ಇದೆ.

Font Awesome Icons

Leave a Reply

Your email address will not be published. Required fields are marked *