ವಾಷಿಂಗ್ಟನ್: ಗೇಮ್ ಆಫ್ ಥ್ರೋನ್ಸ್‌ನಲ್ಲಿ ನಟಿಸಿದ್ದ ನಟ ಡ್ಯಾರೆನ್ ಕೆಂಟ್ ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಸಾವನಪ್ಪಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಈ ಕುರಿತು ಅವರ ಟ್ಯಾಲೆಂಟ್ ಏಜೆನ್ಸಿ, ಕ್ಯಾರಿ ಡಾಡ್ ಅಸೋಸಿಯೇಟ್ಸ್ ಟ್ವೀಟರ್ ನಲ್ಲಿ ಶೋಕ ವ್ಯಕ್ತಪಡಿಸಿದೆ.
ನಮ್ಮ ಆತ್ಮೀಯ ಸ್ನೇಹಿತ ಡ್ಯಾರೆನ್ ಕೆಂಟ್ ಶುಕ್ರವಾರದಂದು ನಿಧನರಾದರು ಎಂಬುದನ್ನು ತಿಳಿಸಲು ಕಷ್ಟವಾಗುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ತಂಡ ಅವ ಕುಟುಂಬದೊಂದಿಗೆ ಇದೆ. ಸ್ನೇಹಿತನಿಗೆ ರಿಪ್ ಮಾಡಿ ಎಂಬ ಒಕ್ಕಣೆಯಿದೆ.
ಇಂಗ್ಲೆಂಡ್ ನ ಎಸೆಕ್ಸ್ ನಲ್ಲಿ ಹುಟ್ಟಿ ಬೆಳೆದ ಡ್ಯಾರೆನ್ ಕೆಂಟ್ 2008ರಲ್ಲಿ ತೆರೆ ಕಂಡ ಮಿರ್ಸ್ ಎಂಬ ಹಾರರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಎಮ್ಮಿ ಪ್ರಶಸ್ತಿ ವಿಜೇತ ಗೇಮ್ ಆಫ್ ಥ್ರೋನ್ಸ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.
It is with deep sadness we have to tell you that our dear friend and client Darren Kent passed away peacefully on Friday. His parents and best friend by his side. Our thoughts and love are with his family in this difficult time. RIP my friend ❤️ pic.twitter.com/Ko0mPFUJNK
— Carey Dodd Associates (@CareyDoddAssos) August 15, 2023