ಗೋಪಾಲಸ್ವಾಮಿ ಬೆಟ್ಟದಲ್ಲಿ ಡ್ರೋನ್‌ ಬಳಕೆಗೆ ಆಕ್ರೋಶ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿಯಮಬಾಹಿರವಾಗಿ ಡ್ರೋನ್ ಕ್ಯಾಮೆರಾ ಬಳಸಿ ದೇವಾಲಯ ಹಾಗೂ ಆನೆಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಡ್ರೋನ್ ಕ್ಯಾಮೆರಾ ಬಳಸಿ ದೇವಾಲಯದ ಚಿತ್ರೀಕರಣ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ ಆನೆಯ ಫೋಟೋಗಳು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಂತೆ ಮಂಗಳವಾರ ಎಡಿಟ್ ಮಾಡಿದ ವೀಡಿಯೋ ಸಹಾ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಂಜೆ ನಾಲ್ಕು ಗಂಟೆ ನಂತರ ಒಬ್ಬರನ್ನೂ ಬೆಟ್ಟದ ಮೇಲೆ ಇರಲು ಬಿಡದ ಅರಣ್ಯ ಇಲಾಖೆ 6 ಗಂಟೆವರೆಗೂ ಇರಲು ಡ್ರೋಣ್ ಕ್ಯಾಮೆರಾ ಬಳಸಲು ಹೇಗೆ ಒಪ್ಪಿಗೆ ನೀಡಿತು. ಸಾರ್ವಜನಿಕರಿಗೆ ಒಂದು ನ್ಯಾಯ ನಿಮಗೊಂದು ನ್ಯಾಯವೇ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಣ್ಣ ತೊಂದರೆಯಾದರೂ ಕಾಯ್ದೆ ಕಟ್ಟಲೆಗಳು ಕಟುವಾಗಿ ಇರುವಾಗ ಡ್ರೋನ್ ಶಬ್ದ ಮಾಡದೆ ಹಾರೀತೆ ಎಂದು ಪ್ರಶ್ನಿಸಿದ್ದಾರೆ.

ಪ್ರಾಣಿಗಳ ಮುಂದೆ ಸೆಲ್ಫಿ ತೆಗೆಯುವ ವೇಳೆ ಸ್ಥಳೀಯರನ್ನು ಬೇರೆ ತರ ಕಾಣುವ ಈ ಅರಣ್ಯ ಅಧಿಕಾರಿಗಳು ಈಗ ಏನೂ ಹೇಳುವರು ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಎದ್ದು ಕಾಣುತ್ತಿದೆ ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಉತ್ತರಿಸುವರೇ ಎಂದು ಆಕ್ರೋಶ ವ್ಯಕ್ತವಾಗಿದೆ.

ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಾದ ಡಾ.ಪಿ.ರಮೇಶ್ ಕುಮಾರ್ ಮಾತನಾಡಿ ಕಳೆದ ವಾರ ಧಾರವಾಹಿ ತಂಡ ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿತ್ತು. ಡ್ರೋನ್ ಚಿತ್ರೀಕರಣ ಬಗ್ಗೆ ಮಾಹಿತಿ ಕೇಳಿ ವಲಯಾರಣ್ಯಾಧಿಕಾರಿಗೆ ನೊಟೀಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *