ಗ್ರಾಮದೊಳಗೆ ಬಂದ ದಲಿತ ಯುವಕನ ಮೇಲೆ ಹಲ್ಲೆ: ಡಿಎಸ್‌ಎಸ್ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಯುವಕನೋರ್ವ ಗ್ರಾಮದೊಳಗೆ ಬಂದ ಎಂದು ಗ್ರಾಮಸ್ಥರು ಆತನ ಮೇಲೆ ಹಲ್ಲೆ ಮಾಡಿ 20 ಸಾವಿರ ದಂಡ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾ| ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ಜನವರಿ 1ರಂದು ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಾರುತಿ ಎಂಬ ಯುವಕ ಜೆಸಿಬಿ ಕೆಲಸಕ್ಕೆಂದು ಗೊಲ್ಲರಹಟ್ಟಿ ಗ್ರಾಮಕ್ಕೆ ಹೋಗಿದ್ದನು. ಈ ವೇಳೆ ಆತನ ಜಾತಿ ಕೇಳಿದ ಸ್ಥಳೀಯರು ದಲಿತ ಎಂದು ಗೊತ್ತಾಗಿ ಹಲ್ಲೆ ಮಾಡಿದ್ದರು. ಆತನ ಜೇಬಿನಲ್ಲಿದ್ದ 20 ಸಾವಿರ ಹಣವನ್ನ ದಂಡ ಎಂದು ಕಟ್ಟಿಸಿಕೊಂಡಿದ್ದರು. ವಿಷಯ ತಿಳಿದ ದಲಿತ ಸಂಘಟನೆಗಳು ಇಂದು ಗ್ರಾಮದೊಳಗೆ ಪ್ರತಿಭಟನೆ ಮಾಡಿ ಹಲ್ಲೆಗೈದವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಮಾರುತಿ ಮೇಲೆ ಹಲ್ಲೆ ಮಾಡಿದ್ದ ಸ್ಥಳದಲ್ಲೇ ನೂರಾರು ದಲಿತ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿ ಹಲ್ಲೆಗೈದರವ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದ ಕಾರಣ ಮೂವರು ಪಿ.ಎಸ್.ಐ. ಹಾಗೂ ತಹಶೀಲ್ದಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಸದ್ಯ ದಲಿತನ ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಗೊಲ್ಲರಹಟ್ಟಿ ಗ್ರಾಮದ 15 ಜನರ ಮೇಲೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *