ಚಿಕಿತ್ಸೆಗೆ  25 ಕೋಟಿ ರೂ. ಹಣಪಡೆದ ಕುರಿತು ಸಮಂತಾ ಹೇಳಿದ್ದೇನು..!

ಮುಂಬೈ: ನಟಿ ಸಮಂತಾ ರುತ್​ ಪ್ರಭು, ಅನಾರೋಗ್ಯದಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೂ ಕೆಲ ಸಿನಿಮಾಗಳಲ್ಲಿಯೂ ಸಮಂತಾ ಬ್ಯುಸಿಯಾಗಿದ್ದರು. ಅಲ್ಲದೆ ಡ್ರಿಪ್‌ ಹಾಕಿಕೊಂಡ ಕೈಯಲ್ಲಿಯೇ ಜಿಮ್‌ ವರ್ಕೌಟ್‌ ಮಾಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ ಶಾಕುಂತಲಂ ಸಿನಿಮಾ ಪ್ರಮೋಷನ್ ಸಮಯದಲ್ಲಿ ಸಮಂತಾ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದರು.

ಆದರೆ ಇದರ ನಡುವೆಯೇ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಮತ್ತು ವರುಣ್ ಧವನ್ ಜೊತೆ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈಗ ಇವುಗಳ ಶೂಟಿಂಗ್ ಮುಗಿದ ಬಳಿಕ ನಟಿ ಬ್ರೇಕ್ ತೆಗೆದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಮೊನ್ನೆಯಷ್ಟೇ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಈ ನಡುವೆ ಸಮಂತಾ ಚೇತರಿಕೆಯ ಹಾದಿಯಲ್ಲಿರುವಾಗಲೇ ಅವರ ಬಗ್ಗೆ ಕೆಲ ವದಂತಿಗಳು ಹರಡಿವೆ. ನಟಿ ಸಮಂತಾ ತನ್ನ ಚಿಕಿತ್ಸೆ ಖರ್ಚಿಗೆ 25 ಕೋಟಿ ರೂ. ಧನ ಸಹಾಯ ಪಡೆದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು.

ಈ ಬಗ್ಗೆ ನಟಿಯೇ ಸ್ವತಃ ಮಾತನಾಡಿದ್ದು, ಮೈಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ ರೂ. ಖರ್ಚು? ಯಾರೋ ಕೆಟ್ಟದಾಗಿ ಡೀಲ್‌ ಮಾಡಿಕೊಂಡಿದ್ದಾರೆ. ಇದರ ಖರ್ಚನ್ನು ನಾನೇ ಮಾಡುತ್ತಿದ್ದೇನೆ ಎಂಬ ಹೆಮ್ಮೆ ನನಗಿದೆ. ಮೈಯೋಸಿಟಿಸ್ ಕಾಯಿಲೆಯಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಚಿಕಿತ್ಸೆ ಸಂಬಂಧ ನಾವು ಜವಾಬ್ದಾರಿಯುತವಾಗಿ ಇರಬೇಕು ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *