ಚಿತ್ರ ಮಂದಿಗಳನ್ನು ಉಳಿಸುವ ಕೆಲಸವಾಗಬೇಕಿದೆ: ಬನ್ನೂರು ರಾಜು 

ಮೈಸೂರು: ನಾಡಿನ ಚಲನಚಿತ್ರ ಮಂದಿರಗಳು ಮತ್ತು ದೈನಿಕ ಪತ್ರಿಕೆಗಳು ನಮ್ಮ  ಸಂಸ್ಕೃತಿಯ ರಾಯಭಾರಿಗಳಂ ತಿದ್ದು ಈಗ ಉಭಯ ಕ್ಷೇತ್ರ ಗಳೂ ಇಂದು ಸಂಕಷ್ಟದಲ್ಲಿದ್ದು ಇವುಗಳನ್ನು ಸರ್ಕಾರ ಬಹಳ ಮುತುವರ್ಜಿಯಿಂದ ಉಳಿಸಿಕೊಳ್ಳುವ ಅಗತ್ಯವಿದೆಯೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಇಂದು ನಗರದ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಎಸ್. ಎಲ್. ಜೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ “ಮುಕ್ತ ಮನಸು” ಕನ್ನಡ ಚಲನ ಚಿತ್ರದ ಬಗ್ಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸರ್ಕಾರದ ಹಲವು ನೀತಿ ನಿಯಮಗಳ ವ್ಯತಿರಿಕ್ತ ಪರಿಣಾಮ ಮತ್ತು ಅನೇಕ ರೀತಿಯ ಪರಿಸ್ಥಿತಿ ಗಳಿಂದಾಗಿ ಚಿತ್ರಮಂದಿರಗಳ ಮಾಲೀಕರು ನಷ್ಟದ ಸ್ಥಿತಿ ತಲುಪಿದ್ದಾರೆ.

ಹಾಗಾಗಿ ಬಹಳಷ್ಟು ಪ್ರದರ್ಶಕರು ಚಲನ ಚಿತ್ರಮಂದಿರಗಳನ್ನು ಮುಚ್ಚಿ ಬೇರೆ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಂತೂ ಚಲನಚಿತ್ರ ಚರಿತ್ರೆಗೆ ಸಾಕ್ಷಿಗಲ್ಲು ಗಳಂತಿದ್ದ  ಅಪೇರ, ರಣಜಿತ್, ರತ್ನ, ಲಕ್ಷ್ಮೀ, ಶಾಂತಲಾ, ಗಣೇಶ,ಚಾಮುಂಡೇಶ್ವರಿ, ತಿಬ್ಬಾದೇವಿ, ಶಾಲಿಮಾರ್, ಶ್ಯಾಮಸುಂದರ್, ಮುಂತಾದ ಐತಿಹಾಸಿಕ ಚಿತ್ರ ಮಂದಿರಗಳನ್ನು ಮುಚ್ಚಲಾಗಿದೆ. ಕೆಲವನ್ನು ಕೆಡವಿ ನೆಲಸಮ ಮಾಡಲಾಗಿದೆ. ಹಾಗಾಗಿ ಸಿನಿಮಾಗಳ ಪ್ರದರ್ಶನಕ್ಕೆ ಅದರಲ್ಲೂ ಹೊಸ ಪ್ರತಿಭೆ ಗಳುಳ್ಳ ಆರ್.ಸಿ.ರಂಗಶೇಖರ್ ರಂತಹ ನಿರ್ದೇಶಕರ “ಮುಕ್ತ ಮನಸು” ವಿನಂತಹ  ಉತ್ತಮ ಚಿತ್ರಕ್ಕೆ ಚಿತ್ರಮಂದಿರ ಸಿಗಲು ಕಷ್ಟವಾಗುತ್ತದೆಂದ ಅವರು, ಬಹುತೇಕ ಎಲ್ಲಾರೂ ಹೊಸಬರೇ ಸೇರಿ ತಯಾರಿಸಿರುವ ಒಂದು ಸದಭಿ ರುಚಿ ಸಿನಿಮಾ ಇದಾಗಿದ್ದು ಸಕುಟುಂಬ ಸಮೇತರಾಗಿ ಚಿತ್ರಮಂದಿರದಲ್ಲಿ ಕುಳಿತು ನೋಡಬಹುದಾಗಿದೆ ಎಂದು ತಿಳಿಸಿದರು.

ಹಾಗೆಯೇ ಇವತ್ತು ಪತ್ರಿಕೋದ್ಯಮದಲ್ಲಿ ಒಂದು ಪತ್ರಿಕೆಯನ್ನು ಅಥವಾ ಒಂದು ಚಾನಲ್ ಅನ್ನು ಉಳಿಸಿ ಬೆಳೆಸುವುದೇ ಬಹಳ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಇವುಗಳಿಗೆಲ್ಲಾ ನೆರವಾಗ ಬೇಕಾಗಿದೆ ಎಂದು ಹೇಳಿದರು.

“ಮುಕ್ತ ಮನಸು” ಚಿತ್ರದ ನಿರ್ದೇಶಕ ಆರ್. ಸಿ. ರಂಗ ಶೇಖರ್ ಮಾತನಾಡಿ ಇದೊಂದು ಒಳ್ಳೆಯ ಚಿತ್ರ. ಬಹಳ ಕಷ್ಟ ಪಟ್ಟು ಮಾಡಿದ್ದೇವೆ. ಎಲ್ಲರೂ ಚಿತ್ರಮಂದಿರದಲ್ಲಿ ನೋಡಿ ನಮ್ಮನ್ನು ಪ್ರೋತ್ಸಾಹಿಸ ಬೇಕೆಂದು ಮನವಿ ಮಾಡಿದರು. ಚಿತ್ರದ ನಾಯಕ ಮೋಹನ್, ನಾಯಕಿ ಮಾನ್ಯ, ನಿರ್ಮಾಪಕ ವೆಂಕಟೇಶ್ ಮಾತನಾಡಿದರು.

ಸಹ ನಿರ್ಮಾಪಕ ಬೋರೇಗೌಡ, ಲೋಕೇಶ್, ಅರ್. ಎಂ. ಧೀರ್, ಮಂಜುನಾಥ ಬಿಳಿಕೆರೆ, ಮಹಾದೇವ ಪ್ರಸಾದ್, ಪವನ್ ದೊರೆ, ಚಂದ್ರು, ಶಶಿಕುಮಾರ್ ಮುಂತಾದವರಿದ್ದರು.

ಇದೇ ವೇಳೆ “ಮುಕ್ತ ಮನಸು” ಚಿತ್ರ ತಂಡದಿಂದ ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ. ರಾಜು ಅವರನ್ನು ಸನ್ಮಾನಿಸಲಾಯಿತು.

Font Awesome Icons

Leave a Reply

Your email address will not be published. Required fields are marked *