ಚುನಾವಣೆ ಆರೋಗ್ಯಕರವಾಗಿ ಎದುರಿಸಬೇಕು: ಅಡ್ಡದಾರಿಯಿಂದಲ್ಲ-ಬಿಜೆಪಿ ಅಭ್ಯರ್ಥಿ ಸಿ.ಎನ್  ಡಾ.ಮಂಜುನಾಥ್.

ಬೆಂಗಳೂರು,ಏಪ್ರಿಲ್,11,2024 (www.justkannada.in):  ಮೈತ್ರಿ ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ  ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ಇದು ಸಂಸ್ಕೃತಿ ಅಲ್ಲ. ಹೆದರಿಸೋದು ಸರಿಯಲ್ಲ. ಚುನಾವಣೆ ಆರೋಗ್ಯಕರವಾಗಿ ಎದುರಿಸಬೇಕು ಹೊರತು ಅಡ್ಡದಾರಿಯಿಂದಲ್ಲ.ಘಟನೆ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತರುತ್ತೇವೆ.  ಚುನಾವಣೆ ವಿರುದ್ದ ದಿಕ್ಕಲ್ಲಿ ಸಾಗ್ತಿದೆ ಅಂತಾ ಅವರಿಗೆ ಗೊತ್ತಾಗಿರಬೇಕು.  ಈ ಸಂಬಂಧ ಡಿಜಿ ಮತ್ತು ಐಜಿಪಿ ಜೊತೆಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.

ಡಾ.ಸಿ.ಎನ್ ಮಂಜುನಾಥ್ ಪರ ಪ್ರಚಾರ ಮಾಡಿದವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು.

Key words: Elections, Healthy, BJP, CN Dr. Manjunath.

The post ಚುನಾವಣೆ ಆರೋಗ್ಯಕರವಾಗಿ ಎದುರಿಸಬೇಕು: ಅಡ್ಡದಾರಿಯಿಂದಲ್ಲ-ಬಿಜೆಪಿ ಅಭ್ಯರ್ಥಿ ಸಿ.ಎನ್  ಡಾ.ಮಂಜುನಾಥ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Font Awesome Icons

Leave a Reply

Your email address will not be published. Required fields are marked *