ಛೋಟಾ ರಾಜನ್​ ಗ್ಯಾಂಗ್​ನ ಪ್ರಸಾದ್ ಪೂಜಾರಿಯನ್ನು ಗಡಿಪಾರು ಮಾಡಿದ ಚೀನಾ

 ಮುಂಬೈ: ಹಿಂದೆ ಛೋಟಾ ರಾಜನ್ ಗ್ಯಾಂಗ್‌ಗೆ ಸಹಾಯಕನಾಗಿ ಕೆಲಸ ಮಾಡಿದ್ದ ಗ್ಯಾಂಗ್‌ಸ್ಟರ್ ಪ್ರಸಾದ್ ಪೂಜಾರಿಯನ್ನು 20 ವರ್ಷದ ಬಳಿಕ ಚೀನಾದಿಂದ ಮುಂಬೈಗೆ ಗಡಿಪಾರು ಮಾಡಿದೆ.

ಪ್ರಸಾದ್ ಪೂಜಾರಿ ಅಲಿಯಾಸ್ ಸುಭಾಷ್ ವಿಠ್ಠಲ್ ನನ್ನು ಚೀನಾದಿಂದ ಮುಂಬೈಗೆ ಗಡಿಪಾರು ಮಾಡುವುದನ್ನು ಮುಂಬೈ ಪೊಲೀಸ್ ತಂಡ ಶನಿವಾರ ಖಚಿತಪಡಿಸಿದ್ದು, ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತನನ್ನು ವಿಚಾರಣೆ ನಡೆಸಲಿದೆ.

ಈತ ಛೋಟಾ ರಾಜನ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು, ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಪೂಜಾರಿಯು ಆರಂಭದಲ್ಲಿ ಕುಮಾರ್ ಪಿಳ್ಳೈ ಗ್ಯಾಂಗ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದ, ನಂತರ ತನ್ನ ಸ್ವಂತ ಗ್ಯಾಂಗ್ ಅನ್ನು ಪ್ರಾರಂಭಿಸುವ ಮೊದಲು ಛೋಟಾ ರಾಜನ್‌ನ ಗ್ಯಾಂಗ್‌ಗೆ ಸೇರಿಕೊಂಡಿದ್ದ.

ಪೂಜಾರಿ (44) ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪತ್ನಿಯೊಂದಿಗೆ ಚೀನಾದಲ್ಲಿ ನೆಲೆಸಿದ್ದ. ಕ್ರೈಂ ಬ್ರಾಂಚ್ ಮತ್ತು ಆಂಟಿ-ಎಕ್ಸ್‌ಟಾರ್ಶನ್ ಸೆಲ್ (ಎಇಸಿ) ಕೆಲವು ವರ್ಷಗಳಿಂದ ಆತನ ಜಾಡು ಹಿಡಿದಿತ್ತು. ಮೂಲತಃ ಕರ್ನಾಟಕದ ಉಡುಪಿಯವನಾದ ಪೂಜಾರಿ ನವಿ ಮುಂಬೈನ ವಾಶಿ ಮತ್ತು ಮುಂಬೈನ ವಿಕ್ರೋಲಿಯಲ್ಲಿ ಆತನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರು.

 

Font Awesome Icons

Leave a Reply

Your email address will not be published. Required fields are marked *