ಜಂತರ್​ ಮಂತರ್​ನಲ್ಲಿ ಉಪವಾಸ ಸತ್ಯಾಗ್ರಹ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಮತ್ತು ಕಾರ್ಯಕರ್ತರು ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಉಪವಾಸ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ನಡೆಯಲಿದೆ.

ದೆಹಲಿ ಸರ್ಕಾರದ ಸಚಿವ ಗೋಪಾಲ್ ರೈ ಪ್ರಕಾರ, ಆಮ್ ಆದ್ಮಿ ಪಕ್ಷದ ಶಾಸಕರು, ಸಚಿವರು, ಸಂಸದರು ಮತ್ತು ಕೌನ್ಸಿಲರ್‌ಗಳು ದೆಹಲಿಯ ಜಂತರ್ ಮಂತರ್ ಮತ್ತು ಪಂಜಾಬ್‌ನ ಶಾಹೀದ್ ಭಗತ್ ಸಿಂಗ್ ಅವರ ಹಳ್ಳಿಯಾದ ಖತ್ಖರ್ಕಲನ್‌ನಲ್ಲಿ ಸಾಮೂಹಿಕ ಉಪವಾಸವನ್ನು ನಡೆಸಲಿದ್ದಾರೆ.

ಇಂದು ದೇಶ ಹಾಗೂ ಜಗತ್ತಿನಾದ್ಯಂತ ಸಿಎಂ ಕೇಜ್ರಿವಾಲ್ ಬೆಂಬಲಿಗರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಉತ್ತರಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ 25 ರಾಜ್ಯಗಳ ರಾಜಧಾನಿಗಳು, ಜಿಲ್ಲಾ ಮತ್ತು ಬ್ಲಾಕ್ ಕೇಂದ್ರಗಳು, ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಸಾಮೂಹಿಕ ಉಪವಾಸ ಮಾಡುವ ಮೂಲಕ ಜನರು ಕೇಜ್ರಿವಾಲ್ ಅವರನ್ನು ಆಶೀರ್ವದಿಸಲಿದ್ದಾರೆ.

ಭಾರತದ ಹೊರತಾಗಿ, ನ್ಯೂಯಾರ್ಕ್, ಬೋಸ್ಟನ್, ಲಾಸ್ ಏಂಜಲೀಸ್, ಯುಎಸ್‌ನ ವಾಷಿಂಗ್ಟನ್ ಡಿಸಿ, ಕೆನಡಾದ ಟೊರೊಂಟೊ, ಆಸ್ಟ್ರೇಲಿಯಾದ ಮೆಲ್ಬೋರ್ನ್, ಯುಕೆ ಯ ಲಂಡನ್ ಸೇರಿದಂತೆ ವಿದೇಶದ ಅನೇಕ ನಗರಗಳಲ್ಲಿ ಜನರು ಸಾಮೂಹಿಕ ಉಪವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *