ಜವಾನ್‌ ಗೆ ಜನರು ಫಿದಾ: 9 ದಿನದಲ್ಲಿ ಆದ ಕಲೆಕ್ಷನ್‌ ನೋಡಿ

ಮುಂಬೈ: ಶಾರುಖ್‌ ಖಾನ್‌ ಅಭಿನಯದ ‘ಜವಾನ್’ ಸಿನಿಮಾ ಸೂಪರ್ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಆರ್ಭಟಿಸುತ್ತಿದೆ. ಚಿತ್ರ ಬಿಡುಗಡೆಯಾಗಿ 9 ದಿನ ಕಳೆದರೂ ಕೂಡ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ.

ಎರಡನೇ ವೀಕೆಂಡ್​ನಲ್ಲಿ ಇನ್ನೂ ಹೆಚ್ಚಿನ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಅಲ್ಲದೇ, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡುವ ಸಾಧ್ಯತೆ ಇದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ‘ಜವಾನ್​’ ಸಿನಿಮಾದ ಕಲೆಕ್ಷನ್ 410 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಚಿತ್ರ 700 ಕೋಟಿ ರೂಪಾಯಿ ದಾಟಿದೆ.

ಶಾರುಖ್​ ಖಾನ್​ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಅಲ್ಲದೇ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ವಿಜಯ್​ ಸೇತುಪತಿ, ಸುನೀಲ್​ ಗ್ರೋವರ್​ ಮುಂತಾದ ಪ್ರತಿಭಾವಂತ ಕಲಾವಿದರು ಕೂಡ ಇದರಲ್ಲಿ ನಟಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *