ಜವಾನ್‌ ಚಿತ್ರದ ವಿಡಿಯೋ ಕ್ಲಿಪ್‌ ಸೋರಿಕೆ: ಎಫ್‌ಐಆರ್‌ ದಾಖಲು

ಮುಂಬೈ: ಶಾರುಖ್‌ ಖಾನ್‌ ಅವರ ಜವಾನ್‌ ಚಿತ್ರದ ಕೆಲ ವಿಡಿಯೋ ಕ್ಲಿಪ್‌ ಗಳು ಸೋರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಐದು ಟ್ವಿಟರ್‌ ಅಕೌಂಟ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ಬ್ಯಾನರ್‌ ನ ಅಡಿಯಲ್ಲಿ ನಿರ್ಮಾಣವಾಗಿರುವ ಜವಾನ್‌ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಚಿತ್ರದ ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಇದರಿಂದ ಚಿತ್ರ ನಿರ್ಮಾಪಕರು ಬೇಸರಗೊಂಡಿದ್ದು, ಎಸ್‌ಆರ್‌ಕೆ ಚಲನಚಿತ್ರ ನಿರ್ಮಾಣ ತಂಡ ಆಗಸ್ಟ್ 10 ರಂದು ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಅಲ್ಲದೆ ಸೋರಿಕೆ ಮಾಡಿದ ಐದು ಟ್ವಿಟರ್‌ ಅಕೌಂಟ್‌ ಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ.

Font Awesome Icons

Leave a Reply

Your email address will not be published. Required fields are marked *