ಜಿಮ್ಸ್ ಆಸ್ಪತ್ರೆ ಐಸಿಯು ವಾರ್ಡ್‌ಗಳಲ್ಲಿ ರೋಗಿಗಳ ಪರದಾಟ

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಒಂದು ತಿಂಗಳಿಂದ ಏರ್‌ ಕೂಲರ್‌ಗಳು ಕೆಟ್ಟಿರುವುದರಿಂದ ಸಮರ್ಪಕವಾಗಿ ಗಾಳಿಯ ವ್ಯವಸ್ಥೆ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಐಸಿಯು ವಾರ್ಡ್‌ನಲ್ಲಿ ಸುಮಾರು 14 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಾಳಿಯ ವ್ಯವಸ್ಥೆ ಇರದ ಕಾರಣ ಐಸಿಯು ಕೋಣೆಯ ಕಿಟಕಿಗಳನ್ನು ತೆಗೆಯಲಾಗಿದೆ.

ಐಸಿಯುನಲ್ಲಿ ಎಸಿ ಇಲ್ಲದೆ ಹಗಲು-ರಾತ್ರಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಕಂಗೆಟ್ಟು ಹೋಗಿದ್ದು, ಐಸಿಯು ವಿಭಾಗದಲ್ಲಿ ಜಿಮ್ಸ್ ಆಡಳಿತ ಮಂಡಳಿ ಕನಿಷ್ಠ ಫ್ಯಾನ್‌ಗಳ ವ್ಯವಸ್ಥೆ ಮಾಡದೇ ಇರುವುದರಿಂದ ರೋಗಿಗಳು ಹೈರಾಣಾಗಿದ್ದಾರೆ. ಕೆಲ ರೋಗಿಯ ಸಂಬಂಧಿಕರು ಮನೆಯಿಂದಲೇ ಫ್ಯಾನ್‌ಗಳನ್ನು ತಂದು ಹಚ್ಚಿದ್ದಾರೆ ಎಂದು ಗೊತ್ತಾಗಿದೆ.

ಜಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸರ್ಕಾರ ರೋಗಿಗಳ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಐಸಿಯುನಲ್ಲಿ ಎ.ಸಿ.ಗಳು ಕೆಟ್ಟು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತಕ್ಷಣ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ, 500 ಎಸಿಗಳನ್ನು ಖರೀದಿಸುವಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

Font Awesome Icons

Leave a Reply

Your email address will not be published. Required fields are marked *