ಜಿಲ್ಲೆಯಾದ್ಯಂತ ‘ಬ್ರಾಂಡ್ ಮೈಸೂರು’ ನೂತನ ಲೋಗೋ ಬಳಸಿ, ಗರಿಮೆ ಹೆಚ್ಚಿಸಲು ಕೈಜೋಡಿಸಿ-ಜಿಲ್ಲಾಡಳಿತ ಮನವಿ. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು,ಡಿಸೆಂಬರ್,19,2023(www.justkannada.in):  ಬ್ರಾಂಡ್ ಮೈಸೂರು ನೂತನ ಲೋಗೋವನ್ನು ಜಿಲ್ಲೆಯಾದ್ಯಂತ ಬಳಸುವುದು ಮತ್ತು ಉತ್ತೇಜಿಸುವುದರ ಮೂಲಕ ಮೈಸೂರನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಸರುವಾಸಿ ಮಾಡಲು ಕೈ ಜೋಡಿಸುವಂತೆ ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ  ಸಮಿತಿ  ಮನವಿ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಮೈಸೂರು ಜಿಲ್ಲಾಡಳಿತ, ಮೈಸೂರು ಈಗಾಗಲೇ ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ಹಲವಾರು ಪ್ರೇಕ್ಷಣಿಯ ಸ್ಥಳಗಳು ಹಾಗೂ ಪ್ರಸಿದ್ಧ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಮೈಸೂರಿನ ಸಾಂಸ್ಕೃತಿಕ ಸೊಬಗು ಹಾಗೂ ಪರಂಪರೆ, ಪ್ರವಾಸೋದ್ಯಮ, ವಾಣಿಜೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಇನ್ನಷ್ಟು ಮುಮ್ಮಡಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಬ್ರಾಂಡ್ ಮೈಸೂರು-2023 ನೂತನ ಲೋಗೋ ಹಾಗೂ ಇತರೆ ಮ್ಯಾಸ್‌ ಕಾಟ್ ಮತ್ತು ಸ್ಮರಣಿಕೆಯನ್ನು ಬಿಡುಗಡೆ ಮಾಡಿದೆ. (ಗಜ್ಜು ಮತ್ತು ಅಮ್ಮು ಇತರೆ)

ನೂತನ ಲೋಗೋವನ್ನು ಮೈಸೂರು ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು ಮತ್ತು ಇತರೆ ಖಾಸಗಿ ಕ್ಷೇತ್ರಗಳಲ್ಲಿ ಬಳಸುವುದರ ಮೂಲಕ ಮೈಸೂರನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಸರುವಾಸಿ ಮಾಡಲು ಕೈ ಜೋಡಿಸಬೇಕು.

ಮುಂದುವರೆದು, ನೂತನ ಲೋಗೋವನ್ನು ಎಲ್ಲಾ ಸರ್ಕಾರಿ ಕಛೇರಿಗಳ ಪತ್ರ ವ್ಯವಹಾರಗಳಲ್ಲಿ ಹಾಗೂ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಬ್ಯಾಕ್‌ ಡ್ರಾಪ್, ಬ್ಯಾನರ್ ಮತ್ತು ಹೋಲ್ಡಿಂಗ್ಸ್‌ ಗಳಲ್ಲಿ ಬಳಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ. ಹಾಗೆಯೇ ಮೈಸೂರಿನ ಇತರೆ ಎಲ್ಲಾ ಖಾಸಗಿ ಮತ್ತು ವಾಣಿಜ್ಯ ವಲಯಗಳಲ್ಲಿ ಮಾರುಕಟ್ಟೆ ಹಾಗೂ ಇತರೆ ಉತ್ಪನ್ನಗಳನ್ನು ಬ್ರಾಂಡ್ ಮೈಸೂರು ಮಾಡುವ ಸಲುವಾಗಿ ಲೋಗೋವನ್ನು ಬಳಸಿಕೊಂಡು ಉತ್ತೇಜನ ನೀಡಬೇಕು.

ಜೊತೆಗೆ ಮ್ಯಾಸ್‌ ಕಾಟ್, ಗಜ್ಜು ಮತ್ತು ಅಮ್ಮು ಇತರೆ ಸ್ಮರಣಿಕೆಗಳನ್ನು ನೂತನ ಲೋಗೋವನ್ನು ಬಳಸಿಕೊಂಡು ಪ್ರವಾಸಿಗರನ್ನು ಹಾಗೂ ಸಾರ್ವಜನಿಕರನ್ನು ಆಕರ್ಷಿಸಲು ಹಾಗೂ ಮೈಸೂರಿನ ಗರಿಮೆಯನ್ನು ಹೆಚ್ಚಿಸಲು ಮೈಸೂರಿನ ಎಲ್ಲಾ ಸಾರ್ವಜನಿಕರಲ್ಲಿ ಮತ್ತು ಪ್ರವಾಸೋದ್ಯಮದ ನೇರ ಪಾಲುದಾರರಲ್ಲಿ ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Key words: use-new logo – Brand Mysore – district and -district administration

Font Awesome Icons

Leave a Reply

Your email address will not be published. Required fields are marked *