‘ಜೈಲರ್’ ಟ್ರೈಲರ್ ಬಿಡುಗಡೆ: ಶಿವಣ್ಣ ನಾಪತ್ತೆ

ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾದ ಆಕ್ಷನ್ ಭರಿತ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್​ನಲ್ಲಿ ರಜನೀಕಾಂತ್​ರ ಎರಡು ಭಿನ್ನ ಅವತಾರಗಳನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ಕಾಮಿಡಿ, ಆಕ್ಷನ್ ಜೊತೆಗೆ ಭಾವುಕ ಸನ್ನಿವೇಶಗಳೂ ಇರಲಿವೆ ಎಂಬುದನ್ನು ಟ್ರೈಲರ್​ ಸೂಚ್ಯವಾಗಿ ಹೇಳುತ್ತಿದೆ. ಎಲ್ಲವೂ ಚೆನ್ನಾಗಿದೆಯಾದರೂ ಟೀಸರ್​ನಲ್ಲಿ ಖದರ್ ಆಗಿ ಕಾಣಿಸಿಕೊಂಡಿದ್ದ ಶಿವಣ್ಣ ಟ್ರೈಲರ್​ನಲ್ಲಿ ನಾಪತ್ತೆಯಾಗಿದ್ದಾರೆ.

ಟ್ರೈಲರ್​ ಅನ್ನು ಕೇವಲ ರಜನೀಕಾಂತ್​ಗೆ ಮಾತ್ರವೇ ಮೀಸಲಿಟ್ಟಂತಿದೆ. ಶಿವರಾಜ್ ಕುಮಾರ್ ಹಾಗೂ ಮೋಹನ್​ಲಾಲ್ ಇಬ್ಬರೂ ಟ್ರೈಲರ್​ನಲ್ಲಿ ಕಂಡು ಬಂದಿಲ್ಲ. ಇದು ಶಿವಣ್ಣನ ಅಭಿಮಾನಿಗಳಿಗೆ ತುಸು ಬೇಸರ ತರಿಸುವ ಸಾಧ್ಯತೆ ಇದೆ.

ಟ್ರೈಲರ್​ನಲ್ಲಿ ಮೂರು ನಾಲ್ಕು ಶೇಡ್​ಗಳಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ. ‘ಜೈಲರ್’ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್, ಮಲಯಾಳಂ ನಟ ಮೋಹನ್​ಲಾಲ್, ತೆಲುಗು ನಟ ಸುನಿಲ್, ಬಾಲಿವುಡ್​ನ ಜಾಕಿ ಶ್ರಾಫ್ ಮಲಯಾಳಂನ ವಿನಾಯಗನ್ ನಟಿಸಿದ್ದಾರೆ. ಇವರುಗಳ ಹೊರತಾಗಿ ನಟಿ ತಮನ್ನಾ, ರಮ್ಯಕೃಷ್ಣ ಅವರುಗಳು ಸಹ ಇದ್ದಾರೆ. ‘ಜೈಲರ್’ ಸಿನಿಮಾ ಆಗಸ್ಟ್ 10ಕ್ಕೆ ಬಿಡುಗಡೆ ಆಗಲಿದೆ.

Font Awesome Icons

Leave a Reply

Your email address will not be published. Required fields are marked *