ವಾರಣಾಸಿ: ಹಿಂದೂ ಧರ್ಮದವರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ವಾರಣಾಸಿಯ ನ್ಯಾಯಾಲಯವು ಬುಧವಾರ ಅನುಮತಿ ನೀಡಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಮುಚ್ಚಿದ ಪ್ರದೇಶವಾದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಹಿಂದೂ ಭಕ್ತರು ಈಗ ಪ್ರಾರ್ಥನೆ ಸಲ್ಲಿಸಬಹುದು. ಹಿಂದಿನ ದಿನದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮುಂದಿನ ಏಳು ದಿನಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ‘ವ್ಯಾಸ್ ಕಾ ತಹಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ, ಈಗ ಎಲ್ಲರಿಗೂ ಪೂಜೆ ಮಾಡುವ ಹಕ್ಕು ಇದೆ ಎಂದು ಹೇಳಿದ್ದಾರೆ.
“1983 ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಬೀಗಗಳನ್ನು ತೆರೆಯಲು ಆದೇಶಿಸಿದ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ ಅವರು ನೀಡಿದ ಆದೇಶದಂತೆ ವಾರಾಣಸಿ ನ್ಯಾಯಾಲಯದ ಇತ್ತೀಚಿನ ಆದೇಶವನ್ನು ನಾನು ನೋಡುತ್ತೇನೆ” ಎಂದು ವಕೀಲ ವಿಷ್ಣು ಜೈನ್ ಹೇಳಿದ್ದಾರೆ. ಗೋರಖ್‌ಪುರ ನಿವಾಸಿಯಾದ ಜೆಎಂ ಪಾಂಡೆ ಅವರ ಆದೇಶದ ಮೇರೆಗೆ ರಾಮಮಂದಿರದ ಬೀಗವನ್ನು ಪೂಜೆಗಾಗಿ ತೆರೆದ ಮೊದಲ ನ್ಯಾಯಾಧೀಶರಾಗಿದ್ದಾರೆ.
ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಹೇಳಿದ್ದಾರೆ. ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳಿ ಮಸೀದಿ ಸಮಿತಿಯ ಅರ್ಜಿಯ ವಿಚಾರಣೆಯ ದಿನಾಂಕವನ್ನು ನ್ಯಾಯಾಲಯವು ಫೆಬ್ರವರಿ 8 ಕ್ಕೆ ನಿಗದಿಪಡಿಸಿದೆ.