ವಾರಣಾಸಿ: ನ್ಯಾಯಾಲಯದ ಆದೇಶದ ಮೇರೆಗೆ ಬುಧವಾರ ರಾತ್ರಿ ವಾರಣಾಸಿಯ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಪಾಂಡೆ ಅವರು ಇಂದು(ಜ.01) ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಹಿಂದೂಗಳಿಗೆ ದೊಡ್ಡ ಜಯ ಸಿಕ್ಕಿದ್ದು, ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು.
ಕಳೆದ ರಾತ್ರಿ 10.30 ರ ಸುಮಾರಿಗೆ “31 ವರ್ಷಗಳ ನಂತರ ಪ್ರಾರ್ಥನೆಗಾಗಿ ವ್ಯಾಸ ನೆಲಮಾಳಿಗೆಯನ್ನು ತೆರೆಯಲಾಯಿತು” ಎಂದು ಪಾಂಡೆ ಅವರು ತಿಳಿಸಿದ್ದಾರೆ. ಇನ್ನು ನೆಲಮಾಳಿಗೆಯನ್ನು ಸ್ವಚ್ಛಗೊಳಿಸಿದ ನಂತರ, ಲಕ್ಷ್ಮಿ ದೇವಿ ಮತ್ತು ಗಣೇಶನ ಆರತಿಯನ್ನು ಮಾಡಲಾಯಿತು ಎಂದು ಕೆಲವು ಸ್ಥಳೀಯರು ಹೇಳಿದ್ದಾರೆ.
Puja started at gyanvyapi pic.twitter.com/ZjcWYnklCG
— Vishnu Shankar Jain (@Vishnu_Jain1) February 1, 2024