ಜ.18ರಿಂದ ಲಾಲ್ ಬಾಗ್ ನಲ್ಲಿ ‘ಫ್ಲವರ್ ಶೋ’.

ಬೆಂಗಳೂರು, ಜನವರಿ 16,2024(www.justkannada.in):  ಜನವರಿ 26ರ ಗಣರಾಜ್ಯೋತ್ಸವ ಪ್ರಯುಕ್ತ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನವನ್ನ ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಲಾಲ್​ಬಾಗ್ ​ನ ನಿರ್ದೇಶಕ ರಮೇಶ್, ಜನವರಿ 18 ರಿಂದ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫ್ಲವರ್ ಶೋವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಜಗಜ್ಯೋತಿ ಬಸವಣ್ಣನವರ ಜೀವನ ಆಧಾರಿತವಾದ ಫ್ಲವರ್ ಶೋ ಇರಲಿದ್ದು,  ಅನುಭವ‌ಮಂಟಪ ಮುಖ್ಯ ಆಕರ್ಷಣೆಯಾಗಿದೆ. ಒಟ್ಟು 68 ಬಗೆಯ ಹೂಗಳು,22 ವರ್ಣ ರಂಜಿತ ಹೂಗಳು ಇರಲಿವೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 35 ಲಕ್ಷ ಹೂಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ‌ ಎಂದು ರಮೇಶ್ ತಿಳಿಸಿದರು.

ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪ್ರದರ್ಶನ ಇರಲಿದೆ. ಪ್ರತಿವರ್ಷದಂತೆ ಈ ವರ್ಷವು ವಿಶೇಷ ಫ್ಲವರ್ ಶೋ ‌ಆಯೋಜನೆ ಮಾಡಿದ್ದೇವೆ. ಈ ಫ್ಲವರ್ ಶೋ‌ ಮೂಲಕ‌ ಪರಿಸರವನ್ನು ಹೇಗೆ ಪ್ರೀತಿಸಬೇಕು ಅಂತ ಕಲಿಯಬಹುದು ಎಂದು ಹೇಳಿದರು.

ಫಲಪುಷ್ಪ ಪ್ರದರ್ಶನ ನೋಡಲು ಬರುವ ವಯಸ್ಕರಿಗೆ 80 ರೂಪಾಯಿ ಟಿಕೆಟ್ ದರ, ರಜೆ ದಿನಗಳಲ್ಲಿ ವಯಸ್ಕರಿಗೆ 100 ರೂಪಾಯಿ ಟಿಕೆಟ್ ದರ ಇರುತ್ತದೆ.  ಮಕ್ಕಳಿಗೆ 30 ರೂ. ನಿಗದಿ ಮಾಡಿದ್ದೇವೆ. ಶಾಲಾ ಸಮವಸ್ತ್ರ ಧರಿಸಿಕೊಂಡು ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ ಎಂದು ಮಾಹಿತಿ ನೀಡಿದರು.

ENGLISH SUMMARY.

‘Flower Show’ at Lal Bagh from January 18.

Bangalore, January 16, 2024 (www.justkannada.in): On the occasion of Republic Day on January 26. Fruit and flower show organized in Lalbagh.

Lalbagh director Ramesh informed about this and said that the flower show will be held for 11 days from January 18 and Chief Minister Siddaramaiah will inaugurate the flower show.

This time there will be a flower show based on the life of Jagjyoti Basavanna, and the Anubhavamantapa will be the main attraction. There will be a total of 68 types of flowers, 22 colorful flowers. CCTV cameras are installed. Ramesh said that 35 lakh flowers are being used.

The exhibition will be from 6 am to 6 pm. Like every year, this year we have organized a special flower show. He said that through this flower show, we can learn how to love the environment.

The ticket price for adults coming to see the fruit and flower show is 80 rupees, and the ticket price for adults on holidays is 100 rupees. Rs 30 for children. Scheduled. He informed that children who come wearing school uniform will have free entry.

Key words: Flower show –at- Lal Bagh -from -Jan 18.

The post ಜ.18ರಿಂದ ಲಾಲ್ ಬಾಗ್ ನಲ್ಲಿ ‘ಫ್ಲವರ್ ಶೋ’. appeared first on Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Font Awesome Icons

Leave a Reply

Your email address will not be published. Required fields are marked *