ಟಿಕೆಟ್ ಅಧಿಕೃತ ಘೋಷಣೆ ಬಳಿಕ ಪ್ರಚಾರ ಶುರು- ಮಾಜಿ ಸಿಎಂ ಜಗದೀಶ್ ಶೆಟ್ಟರ್. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ಹುಬ್ಬಳ್ಳಿ,ಮಾರ್ಚ್,20,2024(www.justkannada.in): ಬೆಳಗಾವಿಯಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಅಧಿಕೃತವಾಗಿ ಟಿಕೆಟ್ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ಬೆಳಗಾವಿಯ ಪ್ರಮುಖರ ಜೊತೆ ಈಗಾಗಲೇ  ಮಾತನಾಡಿದ್ದೇನೆ. ನಾಳೆ ಟಿಕೆಟ್ ಅಧಿಕೃತ ಘೋಷಣೆಯಾಗುವ ವಿಶ್ವಾಸವಿದೆ. ಟಿಕೆಟ್ ಘೋಷಣೆಯಾದ ಬಳಿಕ ಕ್ಷೇತ್ರಕ್ಕೆ ಹೋಗುವೆ ಎಂದರು.

ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಕೈಗೊಳ್ಳುತ್ತೇನೆ. ಒಂದೆರಡು ದಿನಗಳಲ್ಲಿಯೇ ಘೋಷಣೆ ವಿಶ್ವಾಸವಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಟಿಕೆಟ್ ತಪ್ಪಿಸುವ ಷಡ್ಯಂತ್ರ ನಡೆದಿತ್ತು ಎಂದೆನಿಸಿಲ್ಲ. ಬೆಳಗಾವಿಯ ಮುಖಂಡರಾದ ಅಭಯ ಪಾಟೀಲ, ಪ್ರಭಾಕರ ಕೋರೆ, ಅನಿಲ ಬೆನಕೆ, ಈರಣ್ಣ ಕಡಾಡಿ ಇನ್ನಿತರ ಪ್ರಮುಖರ ಜತೆ ಮಾತನಾಡಿದ್ದು, ಎಲ್ಲರು ಸೇರಿ ಚುನಾವಣೆ ಮಾಡೋಣ ಎಂದಿದ್ದಾರೆ.

ದೇಶದಲ್ಲಿ ಎನ್ ಡಿಎ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ವಾತಾವರಣವಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ಜನರ ಆಶಯವಾಗಿದೆ. ಬಿ.ಎಲ್.ಸಂತೋಷ ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಪಕ್ಷ ಸೇರಿದ ಮೇಲೆ ಅವರ ಭೇಟಿ ಮಾತುಕತೆ ಇನ್ನು ಆಗಿಲ್ಲ.
ಶಾಸಕ ತಮ್ಮ ಕೆಲಸಕ್ಕಾಗಿ ದೆಹಲಿಗೆ ಹೋಗಿರಬಹುದು ಎಂದರು. ಬೆಳಗಾವಿ ಕ್ಷೇತ್ರದ ಪರಿಚಯ ಸ್ಪಷ್ಟ ರೀತಿಯಲ್ಲಿದೆ ಎಂದರು.

Key words: lokasabha election- official announcement –Former CM -Jagdish Shettar.

 

website developers in mysore

Font Awesome Icons

Leave a Reply

Your email address will not be published. Required fields are marked *