ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಜೂ.29 ರಂದು ನಡೆಯಲಿದೆ ಭಾರತ vs ಪಾಕಿಸ್ತಾನ್

ನವದೆಹಲಿ:  ಟಿ20 ವಿಶ್ವಕಪ್ 2024ರ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 1 ರಿಂದ ಈ ಬಾರಿಯ ವಿಶ್ವಕಪ್ ಕದನ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ.

ಇದೀಗ ಭಾರತ ತಂಡದ ಪಂದ್ಯಗಳ ಸಮಯ ಬಹಿರಂಗವಾಗಿದೆ. ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.

ಅಂದರೆ ಭಾರತದ ಪಂದ್ಯಗಳು ಯುಎಸ್​ಎನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಆರಂಭವಾಗಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನೇರ ಪ್ರಸಾರವಾಗಲಿದೆ. ಇಲ್ಲಿ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ.

ಅತ್ತ ಯುಎಸ್​ಎನಲ್ಲಿ ರಾತ್ರಿಯಾಗಿದ್ದರೆ, ಇತ್ತ ಭಾರತದಲ್ಲಿ ಬೆಳಿಗ್ಗೆಯಾಗಿರುತ್ತದೆ. ಹೀಗಾಗಿಯೇ ಭಾರತದ ಪಂದ್ಯಗಳನ್ನು ಯುಎಸ್​ಎನಲ್ಲಿ ಬೆಳಿಗ್ಗೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ವೀಕ್ಷಕರ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ಭಾರತದ ಪಂದ್ಯಗಳಿಗೆ ಬೆಳಿಗ್ಗೆ ಸಮಯ ನಿಗದಿ ಮಾಡಲಾಗಿದೆ.

ಟಿ20 ವಿಶ್ವಕಪ್​ನ ಹೈವೊಲ್ಟೆಜ್ ಫೈಟ್ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಜೂನ್ 9 ರಂದು ನಡೆಯಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ನ್ಯೂಯಾರ್ಕ್​ನ ಹೊಸ ಸ್ಟೇಡಿಯಂ ಆತಿಥ್ಯವಹಿಸಲಿದೆ.  ಪಂದ್ಯವು ಯುಎಸ್​ಎ ಕಾಲಮಾನ ಬೆಳಿಗ್ಗೆ 9.30 ರಿಂದ ಶುರುವಾಗಲಿದ್ದು, ಭಾರತದಲ್ಲಿ ರಾತ್ರಿ 8 ಗಂಟೆಯಿಂದ ನೇರ ಪ್ರಸಾರವಾಗಲಿದೆ.

ಭಾರತದ T20 ವಿಶ್ವಕಪ್ ವೇಳಾಪಟ್ಟಿ:

  1. ಭಾರತ vs ಐರ್ಲೆಂಡ್, ಜೂನ್ 5, ನ್ಯೂಯಾರ್ಕ್ (8:00 PM IST)
  2. ಭಾರತ vs ಪಾಕಿಸ್ತಾನ್, ಜೂನ್ 9, ನ್ಯೂಯಾರ್ಕ್ (8:00 PM IST)
  3. ಭಾರತ vs ಯುಎಸ್​ಎ, ಜೂನ್ 12, ನ್ಯೂಯಾರ್ಕ್ (8:00 PM IST)
  4. ಭಾರತ vs ಕೆನಡಾ, ಜೂನ್ 15, ಫ್ಲೋರಿಡಾ (ರಾತ್ರಿ 8:00 IST)

Font Awesome Icons

Leave a Reply

Your email address will not be published. Required fields are marked *