ಉತ್ತರ ಪ್ರದೇಶ: ಚಹಾ ಕೇಳಿದ್ದಕ್ಕೆ ಪತ್ನಿಯೊಬ್ಬಳು ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಪತಿಗೆ ರಕ್ತಸ್ರಾವವಾಗುತ್ತಿದ್ದರೂ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾಳೆ.
ಅಂಕಿತ್ ಮೂರು ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದ, ಸ್ವಲ್ಪ ಸಮಯದ ನಂತರ, ದಂಪತಿ ಮನೆಯ ವಿಷಯಗಳ ಬಗ್ಗೆ ಆಗಾಗ್ಗ ಜಗಳವಾಡುತ್ತಿದ್ದರು.
ಘಟನೆಗೆ ಮೂರು ದಿನಗಳ ಮೊದಲು ಅಂಕಿತ್ ಅವರ ಪತ್ನಿ ಅವರು ಮತ್ತು ಅವರ ಕುಟುಂಬದ ವಿರುದ್ಧ ಹಲ್ಲೆಯ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂಕಿತ್ ಒಂದು ಕಪ್ ಚಹಾ ಕೇಳಿದ್ದರು, ಇದರಿಂದ ಕೋಪಗೊಂಡಿದ್ದ ಪತ್ನಿ ಪತಿ ಮೇಲೆ ಹಲ್ಲೆ ನಡೆಸಿ ಓಡಿ ಹೋಗಿದ್ದಳು. ಅಂಕಿತ್ ಅಳುವನ್ನು ಕೇಳಿದ ಅತ್ತಿಗೆ ಹಾಗೂ ಮಕ್ಕಳು ಹೊರಬಂದು ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯನ್ನು ಹಿಡಿಯಲು ಪೊಲೀಸರು ತಂಡಗಳನ್ನು ರಚಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.