ಟೆಸ್ಟ್ ಪಂದ್ಯದ ವೇಳೆ ಲೈವ್‌ ನಲ್ಲಿ ತಮ್ಮದೇ ವಿಡಿಯೋ ನೋಡಿ ಕಪಲ್ಸ್​​ಗೆ ಗಾಬರಿ

ಮೆಲ್ಬೋರ್ನ್:  ಮೆಲ್ಬೋರ್ನ್​​ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳನ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇಂದು ನಾಲ್ಕನೇ ದಿನದ ಸೆಷನ್ ಮುಂದುವರಿದಿದೆ.

ಇದರ ಮಧ್ಯೆ ಮೂರನೇ ದಿನದ ಆಟದ ವೇಳೆ ಕ್ಯಾಮೆರಾಮ್ಯಾನ್ ಪ್ರೇಮಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಲಾಕ್ ಮಾಡಿದ್ದಾರೆ. ವೀಕ್ಷಕರ ಗ್ಯಾಲರಿಯ ಮೇಲ್ಭಾಗದಲ್ಲಿ ಕೂತಿದ್ದ ಈ ಜೋಡಿಯ ಸುತ್ತಮುತ್ತ ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಸ್ವಲ್ಪ ಲಿಬರಲ್ ಆಗಿದ್ದರು.

ಅದು ಕ್ಯಾಮೆರಾಮ್ಯಾನ್ ಕಣ್ಣಿಗೆ ಬಿದ್ದಿದೆ. ಸರ್ಪ್ರೈಸಿಂಗ್ ರೀತಿಯಲ್ಲಿ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಅದು ನೇರ ಲೈವ್ ಆಗಿದ್ದರಿಂದ ಟಿವಿ ಹಾಗೂ ಅಲ್ಲಿರುವ ಎಲ್​ಇಡಿಗಳ ಮೇಲೆ ಪ್ರಸಾರವಾಗಿದೆ. ಅದನ್ನು ಗಮನಿಸಿದ ಇಬ್ಬರು, ಬೇರೆ ಬೇರೆಯಾಗಿ ಕೂತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Font Awesome Icons

Leave a Reply

Your email address will not be published. Required fields are marked *