‘ಟೈಗರ್​ 3’ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ

ನಟ ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಈ ಸಿನಿಮಾದಲ್ಲಿ ಅವರ ಜೊತೆ ಕತ್ರಿನಾ ಕೈಫ್​, ಇಮ್ರಾನ್​ ಹಷ್ಮಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ಗಮನ ಸೆಳೆದಿದೆ. ನವೆಂಬರ್​ 12ರಂದು ‘ಟೈಗರ್​ 3’ ರಿಲೀಸ್​ ಆಗಲಿದೆ. ಸೆನ್ಸಾರ್​ ಮಂಡಳಿಯಿಂದ ಈ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ.

ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಅವಧಿ 2 ಗಂಟೆ 33 ನಿಮಿಷ ಇದೆ ಎಂಬ ಮಾಹಿತಿ ಕೂಡ ಈಗ ಸಿಕ್ಕಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಸ್ಥಾನ ಪಡೆದುಕೊಂಡಿದೆ. ಇನ್ನು ‘ಟೈಗರ್​ 3’ ಚಿತ್ರಕ್ಕೆ ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆ ಬಂಡವಾಳ ಹೂಡಿದೆ. ಮನೀಶ್​ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಯು/ಎ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಫ್ಯಾಮಿಲಿ ಪ್ರೇಕ್ಷಕರು ತಮ್ಮ ಮಕ್ಕಳ ಜೊತೆ ಬಂದು ಸಿನಿಮಾ ನೋಡಬಹುದು. ಇದರಿಂದ ಚಿತ್ರಕ್ಕೆ ಅನುಕೂಲ ಆಗಲಿದೆ.

Font Awesome Icons

Leave a Reply

Your email address will not be published. Required fields are marked *