ಟ್ಯೂಷನ್‌ನಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ

ಬೆಂಗಳೂರು: ಟ್ಯೂಷನ್‌ನಲ್ಲಿ ಪಾಠ ಮಾಡುವ ಶಿಕ್ಷಕರು ಜೋರಾಗಿ ಗದರಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿರೋ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಬಾಲಕನನ್ನು ಪರಿಣವ್(12) ಎಂದು ಗುರುತಿಸಲಾಗಿದೆ.

ವೈಟ್‌ಫೀಲ್ಡ್‌ನ ಡೀನ್ಸ್ ಅಕಾಡೆಮಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ. ಟ್ಯೂಷನ್‌ನಲ್ಲಿ ಬೈದಿದ್ದಕ್ಕೆ ಬಾಲಕ ಮನೆ ಬಿಟ್ಟು ಹೋಗಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.

6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಜನವರಿ 21ರಂದು ಪರಿಣವ್ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು 24 ಗಂಟೆಯಾದರೂ ಇನ್ನೂ ಪತ್ತೆಯಾಗಿಲ್ಲ. ಬಾಲಕನಿಗಾಗಿ ಹುಡುಕಾಟ ನಡೆಸುತ್ತಿರುವ ಪೋಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನೀವು ಈ ಮಗುವಿನ ಬಗ್ಗೆ ಯಾವುದೇ ಮಾಹಿತಿ ಪಡೆದರೆ ದಯವಿಟ್ಟು ತಂದೆ, ತಾಯಿಯನ್ನು ಸಂಪರ್ಕಿಸಿ. ದಯವಿಟ್ಟು ತಮ್ಮ ಮಗ ನಮ್ಮೊಂದಿಗೆ ಒಂದಾಗಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *