ಟ್ರಕ್​ ಕಂದಕಕ್ಕೆ ಉರುಳಿ ಓರ್ವ ಸಾವು,13 ಮಂದಿಗೆ ಗಾಯ, ನೆರವಿಗೆ ಧಾವಿಸಿದ ಗೋವಾ ಸಿಎಂ

ಗೋವಾ: ಗೋವಾದಲ್ಲಿ ಟ್ರಕ್​ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಟ್ರಕ್​ ತಿರುಗಿ ಕಂದಕಕ್ಕೆ ಬಿದ್ದಿತ್ತು. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಮಕ್ಕಳು ಸೇರಿದಂತೆ 13 ಮಂದಿ ಪುರುಷರು ಮತ್ತು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಸಿಎಂ ಪ್ರಮೋದ್ ಸಾವಂತ್ ಗಾಯಾಳುಗಳಿಗೆ ನೆರವಾದರು. ಆಯುರ್ವೇದ ವೈದ್ಯರಾಗಿರುವ ಸಾವಂತ್ ಅವರು ಸಂತ್ರಸ್ತರ ನಾಡಿಮಿಡಿತವನ್ನು ಪರಿಶೀಲಿಸಿದರು, ಫಲ್ ದೇಸಾಯಿ ಅವರು ಕಂದಕಕ್ಕೆ ಇಳಿದು ಅಪಘಾತಕ್ಕೀಡಾದ ವಾಹನದಿಂದ ಗಾಯಾಳುಗಳನ್ನು ಹೊರತೆಗೆಯಲು ಸಹಾಯ ಮಾಡಿದರು. ಸದ್ಯ ಪಣಜಿ ಬಳಿಯ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಗಾಯಾಳುಗಳನ್ನು ಸ್ಥಳಾಂತರಿಸಿದರು.

Font Awesome Icons

Leave a Reply

Your email address will not be published. Required fields are marked *