ಟ್ರೈಲರ್​ನಿಂದಲೇ ಕುತೂಹಲ ಹುಟ್ಟಿಸಿರೋ “ಇನಾಮ್ದಾರ್” ರಿಲೀಸ್‌ ಡೇಟ್‌ ಫಿಕ್ಸ್

ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಬಹುನಿರೀಕ್ಷಿತ ‘ಇನಾಮ್ದಾರ್’ ಅಕ್ಟೋಬರ್ 27 ರಂದು ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ತಿಳಿಸಿದ್ದಾರೆ. ಟ್ರೇಲರ್​ನಿಂದಲೇ ಕುತೂಹಲ ಹುಟ್ಟಿಸಿರೋ ಇನಾಮ್ದಾರ್ ಚಿತ್ರವು ಉತ್ತರ ಕರ್ನಾಟಕದಿಂದ ಬಂದ ಶ್ರೀಮಂತ ‘ಇನಾಮ್ದಾರ್ ಕುಟುಂಬ, ಶಿವಾಜಿ ಮಹಾರಾಜರ ನಿಷ್ಠಾವಂತ ಆರಾಧಕರು ಮತ್ತು ಕರಾವಳಿ ಪ್ರದೇಶದಲ್ಲಿನ ಶಿವನ ಭಕ್ತರ ನಡುವಿನ ನಾಗರಿಕತೆಯ ಘರ್ಷಣೆಯನ್ನು ತೋರಿಸುತ್ತದೆ.

ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಿಸಿರುವ ‘ಇನಾಮ್ದಾರ್’ ಐದು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಕಪ್ಪು ಸುಂದರಿಯ ಸುತ್ತ (ಕಪ್ಪು ಮೈಬಣ್ಣದ ಸುಂದರ ಮಹಿಳೆಯ ಕಥೆ) ಎಂಬ ಟ್ಯಾಗ್ ಲೈನ್ ನೀಡುವ ಮೂಲಕ ಚಿತ್ರಕಥೆ ಯಾವ ರೀತಿ ಇರುತ್ತದೆ ಎಂಬುದನ್ನು ಸಂದೇಶ್ ಶೆಟ್ಟಿ ಆಜ್ರಿ ಬಹಿರಂಗಪಡಿಸಿದ್ದಾರೆ.

ನಿರಂಜನ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ರಂಜನ್ ಛತ್ರಪತಿ, ಚಿರಶ್ರೀ ಅಂಚಿನ್, ಎಸ್ತರ್ ನೊರೊನ್ಹಾ, ಸಂದೇಶ್ ಶೆಟ್ಟಿ ಆಜ್ರಿ, ಪ್ರಮೋದ್ ಶೆಟ್ಟಿ, ಎಂಕೆ ಮಠ, ಥ್ರಿಲ್ಲರ್ ಮಂಜು, ಶರತ್ ಲೋಹಿತಾಶ್ವ, ಅವಿನಾಶ್, ರಘು ಪಾಂಡೇಶ್ವರ್, ಮತ್ತು ಕರಣ್ ಕುಂದರ್ ನಟಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *