ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ತಂಡದ ಅನ್‌ಬಾಕ್ಸ್ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿದೆ.
ಈ ವೇಳೆ ಡಬ್ಲ್ಯೂಪಿಎಲ್-2024 ಟ್ರೋಫಿ ಗೆದ್ದ ಮಹಿಳಾ ಆಟಗಾರ್ತಿಯರಿಗೆ ಪುರುಷರ ತಂಡವು ಕಾರ್ಯಕ್ರಮದಲ್ಲಿ ಸ್ವಾಗತ (ಗಾರ್ಡ್ ಆಫ್ ಹಾನರ್) ಕೋರಿತು.
ಅನ್‌ಬಾಕ್ಸ್ ಕಾರ್ಯಕ್ರಮದ ವೇಳೆ ಡಬ್ಲ್ಯೂಪಿಎಲ್ ಟ್ರೋಫಿ ಹಿಡಿದು ಮಹಿಳಾ ತಂಡದ ನಾಯಕಿ ಫೀಲ್ಡಿಗೆ ಎಂಟ್ರಿ ಕೊಟ್ಟಿದ್ದು, ಅವರ ಜೊತೆ ತಂಡದ ಆಟಗಾರರು ಸಾಲಾಗಿ ಬರುತ್ತಾರೆ. ಇವರನ್ನು ಆರ್‌ಸಿಬಿ ತಂಡದ ಪುರುಷ ಆಟಗಾರರು ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಸ್ವಾಗತ ಕೋರುತ್ತಾರೆ.
ಸದ್ಯ ಈ ದೃಶ್ಯದ ವೀಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.