ಟ್ರ್ಯಾಕ್ಟರ್‌ಗೆ ಓಮಿನಿ ವ್ಯಾನ್​ ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

ದಾವಣಗೆರೆ: ಟ್ರ್ಯಾಕ್ಟರ್‌ಗೆ ಮಾರುತಿ ಓಮಿನಿ ವ್ಯಾನ್​ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಗುಳ್ಳೇಹಳ್ಳಿ ಗ್ರಾಮದ ಬಳಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಮೃತರನ್ನು ರುದ್ರೇಶಪ್ಪ (64), ಮಲ್ಲಿಕಾರ್ಜುನ್ (62) ಹಾಗೂ ಗಂಗಮ್ಮ (80) ಎಂದು ಗುರುತಿಸಲಾಗಿದೆ. ರತ್ನಮ್ಮ ಅವರಿಗೆ ತೀವ್ರ ಗಾಯಗಳಾಗಿವೆ. ಇವರು ವಾಹನದಲ್ಲಿ ಸಂತೇಬೆನ್ನೂರು ಕಡೆಯಿಂದ ಚನ್ನಗಿರಿ ಕಡೆಗೆ ಬರುತ್ತಿದ್ದರು. ಈ ವೇಳೆ ರಾಜ್ಯ ಹೆದ್ದಾರಿಯಲ್ಲಿ ಭತ್ತದ ಹುಲ್ಲನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.

ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *