ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ರ ಜನಪ್ರೀಯತೆ ಹೆಚ್ಚಿದ್ದು, ಅವರ ಅನೇಕ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಜೊತೆಗೆ ಟ್ವಿಟರ್‌ಲ್ಲೂ ಅವರ ಹೆಸರು ಟ್ರೆಂಡ್ ಆಗುತ್ತಿದ್ದು, ʼwe love Drone Prathapʼ ಎಂಬ ಹ್ಯಾಶ್ ಟ್ಯಾಗ್ ಹರಿದಾಡುತ್ತಿದೆ. ಭಾರತದ ಟ್ರೆಂಡ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
ಎರಡು ದಿನ ಸತತ ಉಪವಾಸದ ಕಾರಣ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರತಾಪ್ ಬಿಗ್ ಬಾಸ್ ಗೆ ಮತ್ತೆ ಮರಳಿದ್ದಾರೆ. ಈ ಕಾರ್ಯಕ್ರಮದಿಂದ ಅವರ ಬಗ್ಗೆ ಜನರಿಗಿದ್ದ ಅಭಿಪ್ರಾಯ ಬದಲಾಗಿದ್ದಷ್ಟೇ ಅಲ್ಲ, ಅನೇಕ ಹೊಸ ಅಭಿಮಾನಿಗಳನ್ನೂ ಅವರು ಹೊಂದಿದಂತಾಗಿದೆ.
ಒಂದೆರಡು ವಾರಗಳಲ್ಲಿ ಅವರು ಎಲಿಮಿನೇಟ್ ಆಗಬಹುದೆಂಬ ನಿರೀಕ್ಷೆ ಸುಳ್ಳಾಗಿದ್ದು, ಈ ವಾರ ನಾಮಿನೇಷನ್ ಪಟ್ಟಿಯಲ್ಲಿರುವ ಅವರು ಉಳಿಯಬೇಕಾದರೆ ಹೆಚ್ಚು ಮತ ಪಡೆಯಬೇಕಾದ ಅನಿವಾರ್ಯತೆಯಿದೆ.