ಡಾಲಿ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್

ಡಾಲಿ ಧನಂಜಯ್ ನಾಳೆ (ಆ.23) ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಇಂದು (ಆ.22) ಅವರ ನಟನೆಯ ಹೊಸ ಸಿನಿಮಾ ‘ಉತ್ತರಕಾಂಡ’ದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ.

ಸಿನಿಮಾದಲ್ಲಿ ‘ಗಬ್ರು ಸತ್ಯ’ನ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ ನಟ ಡಾಲಿ ಧನಂಜಯ್. ಇದೀಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಉಡಾಳ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.

ರೋಹಿತ್ ಪದಕಿ ನಿರ್ದೇಶನದಲ್ಲಿ ಉತ್ತರಕಾಂಡ ಸಿನಿಮಾ ಮೂಡಿ ಬರಲಿದ್ದು, ಮೋಹಕ ತಾರೆ ರಮ್ಯಾ ಮತ್ತೆ ಈ ಸಿನಿಮಾದ ಮೂಲಕ ನಟಿಯಾಗಿ ಚಿತ್ರೋದ್ಯಮಕ್ಕೆ ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ಡಾಲಿ ಜೊತೆ ರಮ್ಯಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾವನ್ನು ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಚರಣ್ ರಾಜ್. ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.

 

Font Awesome Icons

Leave a Reply

Your email address will not be published. Required fields are marked *