ಡಾ. ಡಿ ತಿಮ್ಮಯ್ಯ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಮೈಸೂರು: ಸಮಾಜ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು,  ಆರ್ಥಿಕವಾಗಿ ದುರ್ಬಲರಾದ ಬಡವರು ಹಾಗೂ  ಸಮಾಜದ ಏಳ್ಗೆಗೆ ಅದ್ಯತೆ ಇರಲಿ. ಈ ದಿಸೆಯಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ತನ್ನ ವಿಶಿಷ್ಟ ಸೇವೆಗಳ ಮೂಲಕ ಮೈಸೂರು ನಗರದಲ್ಲಿ ಮಹತ್ವದ ಸ್ಥಾನ ಪಡೆದಿದೆ  ಎಂದು ವಿಧಾನಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಹೇಳಿದರು

ನಗರದ ಎಂ ಜಿ ರಸ್ತೆಯಲ್ಲಿರುವ ಸಿಪಾಯಿ ಗ್ರಾಂಡ್ ಹೋಟೆಲ್ ನಲ್ಲಿ  ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ 18ನೇ ವರ್ಷದ  ವಾರ್ಷಿಕೋತ್ಸವದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಚಾಣಕ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಕೆ ಬಿ ಲಿಂಗರಾಜು (ಕೈಗಾರಿಕಾ ಕ್ಷೇತ್ರ), ಡಾಕ್ಟರ್ ವೈ ಡಿ ರಾಜಣ್ಣ (ಸಾಹಿತ್ಯ ಕ್ಷೇತ್ರ), ಆರ್ ಕೃಷ್ಣ (ಮಾಧ್ಯಮ ಕ್ಷೇತ್ರ), ಶ್ರೀಧರ್ ಸಿ ಎಂ (ಸೈನಿಕ ಕ್ಷೇತ್ರ), ಶಿವಪ್ರಸಾದ್ (ಆರೋಗ್ಯ ಕ್ಷೇತ್ರ), ರಶ್ಮಿ (ಆರೋಗ್ಯ ಕ್ಷೇತ್ರ), ಅಮ್ಮ ರಾಮಚಂದ್ರ (ಜನಪದ ಕ್ಷೇತ್ರ), ಡಾಕ್ಟರ್ ಕವಿತಾ ಮಠದ (ಶಿಕ್ಷಣ ಕ್ಷೇತ್ರ), ಮಲ್ಲೇಶ್ (ಆರೋಗ್ಯ ಕ್ಷೇತ್ರ), ಶೋಭಾ (ರೂಪದರ್ಶಿ ಕ್ಷೇತ್ರ) ಇವರಿಗೆ ಚಾಣಕ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು.

ಸದೃಢ ಸಮಾಜ ನಿರ್ಮಾಣಕ್ಕೆ ಯುವಕರು ಪಣ ತೊಡಬೇಕು. ಪ್ರಾಮಾಣಿಕ ಸಮಾಜ ಸೇವೆ ಮಾಡುವಂತಹ ಸಂಘಟನೆಗಳು  ಹುಟ್ಟುವುದು ಅಗತ್ಯವಾಗಿದೆ. ಸಾಮಾಜಿಕ ಅಸಮಾನತೆ ಹೋಗಲಾಡಿವುದು ಎಲ್ಲರ ಮುಖ್ಯ ಗುರಿಯಾಗಿರಲಿ ಎಂದು ಹೇಳಿದರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ,  ಇತ್ತೀಚಿನ ದಿನಗಳಲ್ಲಿ ಸಂಸ್ಥೆಗಳು ಬರೀ ಲೆಟ್ರೀಡ್ ಗೆ ಸೀಮಿತ ಗೊಂಡಿದ್ದು, ಅವುಗಳ ಹೊರತಾಗಿ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ನಾ ಕಂಡಂತೆ 18 ವರ್ಷಗಳಿಂದ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ, ಸಾಮಾಜಿಕವಾಗಿ ಸಕಲ ಜೀವರಾಶಿಗಳಿಗೆ ಸೇವೆ ಸಲ್ಲಿಸುತ್ತಿದೆ, ಚಳಿಗಾಲದಲ್ಲಿ ಹೊದಿಕೆ ವಿತರಣೆಯಿಂದ ಹಿಡಿದು ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಕಾಲು ಒದಗಿಸುವುದು, ದೀನ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾವೇತನ ಹಾಗೂ ಆರ್ಥಿಕ ಸಹಾಯ ನೀಡುತ್ತಾ ಬಂದಿರುವುದು ಇದರ ಹೆಗ್ಗಳಿಕೆ ಮುಂದಿನ ದಿನಗಳಲ್ಲಿ ಟ್ರಸ್ಟ್ ಇನ್ನೂ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಅಭಿನಂದಿತರಲ್ಲಿ ಒಬ್ಬರಾದ ಡಾ. ವೈ.ಡಿ.ರಾಜಣ್ಣ ಮಾತನಾಡಿ ಕೆಎಂಪಿಕೆ ಚಾರಿಟಬಲ್  ಟ್ರಸ್ಟ್  ಮೈಸೂರಿನ ಸಾಮಾಜಿಕ  ಸಂಸ್ಥೆಗಳಲ್ಲಿ ತನ್ನ ಜನಮುಖಿ ಸೇವೆಗಳ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಂಡಿದೆ. ಯುವ ಉತ್ಸಾಹಿ ಅಧ್ಯಕ್ಷರಾಗಿ ವಿಕ್ರಂ ಕೆಎಂಪಿಕೆ ಟ್ರಸ್ಟ್ ನ್ನು ಸಾಹಿತ್ಯ ಸಂಸ್ಜೃತಿ ಯ ಕೆಲಸಗಖ ಜತೆಗೆ ಕರೋನಾ ಸಂದರ್ಭದಲ್ಲಿ ಕೂಡ ಮಾನವೀಯ ಅಂತಃಕರಣದ ಸೇವೆಗಳ ಮೂಲಕ ಮೈಸೂರಿಗರ ಗಮನ ಸೆಳೆದು ತನ್ನ ಸಾಮಾಜಿಕ ಹೊಣೆಗಾರಿಕೆಗೆ ಪಾತ್ರವಾಗಿದೆ ಎಂದರು.

ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್  ಮಾತನಾಡಿ  ಕೆ ಎಂ ಪಿ ಕೆ ಟ್ರಸ್ಟ್ ಮೈಸೂರಿನ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಆ ಮತ್ತು ಇತರೆ ಕ್ಷೇತ್ರದಲ್ಲಿ ಸಾರ್ಥಕ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಕಾರ್ಯ ಎಂದರು, ಕೆಎಂಪಿ ಕೆ ಟ್ರಸ್ಟ್ ಎಲ್ಲ ಕಾರ್ಯಗಳಿಗೆ ಒತ್ತಾಸೆಯಾಗಿ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು

ಇದೇ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್,  ಉದ್ಯಮಿ ಸ್ವೀಟ್ ಮಹೇಶ್, ಹೋಟೆಲ್  ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಜಯ್ ಶಾಸ್ತ್ರಿ, ಪ್ರಕಾಶ್ ಪ್ರಿಯದರ್ಶನ್, ರೇಖಾ ಶ್ರೀನಿವಾಸ್, ವಿದ್ಯಾ, ದೀಪ, ಬೈರತಿ ಲಿಂಗರಾಜು, ಮಂಜುನಾಥ್ , ಸಚಿಂದ್ರ ಇನ್ನಿತರರು ಹಾಜರಿದ್ದರು.

Font Awesome Icons

Leave a Reply

Your email address will not be published. Required fields are marked *