ಡಿವೈಡರ್​ ಹಾರಿ​ ಬೈಕ್​ಗೆ ಲಾರಿ ಡಿಕ್ಕಿ: ಸವಾರ ಗಂಭೀರ

ಬೆಂಗಳೂರು: ಯಶವಂತಪುರ ಬಳಿಯ ಟಾಟಾ ಇನ್ಸ್ಟಿಟ್ಯೂಟ್ ಬಳಿ ಲಾರಿಯೊಂದು ಡಿವೈಡರ್ ಹಾರಿ ಮುಂದೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಈ ವೇಳೆ ಮುಂದೆ ಬರುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಸವಾರನ ಸ್ಥಿತಿ ಗಂಭೀರವಾಗಿದೆ. ಚಾಲಕ ಲಾರಿಯನ್ನು ಚಲಾಯಿಸುತ್ತಾ ಯಶವಂತಪುರದಿಂದ ಬರುತ್ತಿದ್ದನು. ರಾತ್ರಿ 12 ಗಂಟೆ ಸುಮಾರಿಗೆ ಬರುತ್ತಿದ್ದಾಗ ಡಿವೈಡರ್ ಹಾರಿಸಿ ಮಲ್ಲೇಶ್ವರಂ ಕಡೆಯಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೊಳಗಾದ ಬೈಕ್ ಚಾಲಕನ ಮುಖ ಹಾಗೂ ದೇಹದ ಕೆಲ ಭಾಗಗಳಲ್ಲಿ ಗಾಯ ಆಗಿದೆ.

ಸದ್ಯ ಲಾರಿ ಚಾಲಕ ಪರಾರಿಯಾಗಿದ್ದಾನೆ. ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಯಶವಂತಪುರ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *