ಡೆತ್‌ ನೋಟ್‌ ಬರೆದಿಟ್ಟು ಬಿಎ ವಿದ್ಯಾರ್ಥಿ ಆತ್ಮಹತ್ಯೆ

ತುಮಕೂರು: ವಿದ್ಯಾರ್ಥಿಯೋರ್ವ ಡೆತ್‌ ನೋಟ್‌ ಬರೆದಿಟ್ಟು   ಹಾಸ್ಟೆಲ್ ನಲ್ಲಿ   ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಪಟ್ಟಣದ ಹನುಮಂತಪುರ ಬಳಿಯಿರುವ SC, ST ಹಾಸ್ಟೆಲ್ ನಲ್ಲಿ ನಡೆದಿದೆ. ಅಂಜನ್ ಕುಮಾರ್ (19) ಮೃತ ದುರ್ದೈವಿ.

ಅಂಜನ್ ಕುಮಾರ್ ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದವನು.ತುಮಕೂರು ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದನು.  ಇಂದು ಮಧ್ಯಾಹ್ನ ಹಾಸ್ಟೆಲ್ ರೂಮಿನಲ್ಲಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.

ಮಕರ ಸಂಕ್ರಾಂತಿ ಹಬ್ಬಕ್ಕೆ ರಜೆ ಹಿನ್ನೆಲೆ, ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ತಮ್ಮ‌ ಊರುಗಳತ್ತ ತೆರಳಿದ್ರು. ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎನ್ ಇಪಿಎಸ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.  ಎನ್ ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *