ತವರಿನಲ್ಲಿ ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ವಿಶಾಖಪಟ್ಟಣಂ:  ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ಬದುಕಿನ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ನಡೆದ ಹೈದರಾಬಾದ್ ಟೆಸ್ಟ್‌ನಲ್ಲಿ ಶತಕ ವಂಚಿತರಾಗಿದ್ದ ಜೈಸ್ವಾಲ್ 80 ರನ್ ಗಳಿಸಿ ಔಟಾಗಿದ್ದರು.

ಆದರೆ ವಿಶಾಖಪಟ್ಟಣಂನಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್ 151 ಎಸೆತಗಳಲ್ಲಿ ಶತಕ ಪೂರೈಸಿದರು. ಭಾರತದ ಪರ ಕೇವಲ 6 ಟೆಸ್ಟ್ ಪಂದ್ಯಗಳನ್ನಾಡಿರುವ ಜೈಸ್ವಾಲ್‌ಗೆ ಭಾರತದ ನೆಲದಲ್ಲಿ ಇದು ಚೊಚ್ಚಲ ಟೆಸ್ಟ್ ಶತಕವಾಗಿರುವುದರಿಂದ ಈ ಶತಕ ಜೈಸ್ವಾಲ್ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶೇಷವಾಗಿದೆ.

ನಾಯಕ ರೋಹಿತ್ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್‌ ಏಕಾಂಗಿಯಾಗಿ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಏಕೆಂದರೆ ನಾಯಕ ರೋಹಿತ್, ಶುಭ್​ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಬೇಗನೇ ಪೆವಿಲಿಯನ್ ಸೇರಿಕೊಂಡರೂ ಜವಬ್ದಾರಿ ಮರೆಯದ ಜೈಸ್ವಾಲ್ ತಂಡವನ್ನು 200 ರ ಗಡಿ ದಾಟಿಸಿದ್ದಾರೆ.

ಇದರೊಂದಿಗೆ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ್ದಾರೆ. ಜೈಸ್ವಾಲ್ ಈ ಹಿಂದೆ 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 502 ರನ್ ಗಳಿಸಿದ್ದರು. ಈ ಪಂದ್ಯಕ್ಕೂ ಮುನ್ನ ಅವರು 5 ಟೆಸ್ಟ್ ಪಂದ್ಯಗಳಲ್ಲಿ 411 ರನ್ ಗಳಿಸಿದ್ದರು. ಇದೀಗ ಶತಕ ಸಿಡಿಸುವ ಮೂಲಕ ತಮ್ಮ ಟೆಸ್ಟ್​ ರನ್​ಗಳನ್ನು 500ರ ಗಡಿ ದಾಟಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರ ಈ ಶತಕದ ವಿಶೇಷವೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಸರಣಿಯಲ್ಲಿ ಇದು ಟೀಂ ಇಂಡಿಯಾದಿಂದ ಮೊದಲ ಶತಕವಾಗಿದೆ. ಈ ಶತಕದೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರ ವಿಶೇಷ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಕೇವಲ 22 ವರ್ಷಗಳಲ್ಲಿ ಈ ಸಾಧನೆ ಮಾಡಿರುವ ಜೈಸ್ವಾಲ್, 23 ವರ್ಷ ತುಂಬುವ ಮುಂಚೆಯೇ, ಜೈಸ್ವಾಲ್ ತವರು ಮತ್ತು ವಿದೇಶದಲ್ಲಿ ಟೆಸ್ಟ್ ಶತಕ ಸಿಡಿಸಿದ್ದು, ಇದರೊಂದಿಗೆ ಭಾರತ ದಿಗ್ಗಜ ಬ್ಯಾಟರ್​ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ

 

Font Awesome Icons

Leave a Reply

Your email address will not be published. Required fields are marked *