ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ 2024 ಅನ್ನು ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಅಮ್ಮನ ಜೊತೆ ಸೇರಿ ಕಿತ್ತಳೆ ಜಾಮ್ ಯನ್ನು ತಯಾರಿ ಮಾಡುವ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಐಎನ್ಸಿ ಕಾಂಗ್ರೆಸ್ನ ಅಧಿಕೃತ ಟ್ವಿಟರ್ನಲ್ಲಿ ರಾಹುಲ್ ಗಾಂಧಿಯವರು ತಯಾರಿಸಿದ ಆರೆಂಜ್ ಮರ್ಮಾಲಡ್ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ತಮ್ಮ ನಿವಾಸದ ಮುಂದಿರುವ ಕಿತ್ತಳೆ ಗಿಡಗಳ ಬಳಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ತೆರಳಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಆರೆಂಜ್ ಹಣ್ಣುಗಳನ್ನು ಕಿತ್ತುಕೊಂಡು ಒಂದು ಬುಟ್ಟಿಯಲ್ಲಿ ಹಾಕಿಕೊಂಡು ವಾಪಸ್ ಮನೆಯೊಳಗೆ ಬಂದಿದ್ದಾರೆ.
ಸೋನಿಯಾ ಗಾಂಧಿ ಮುಂದೆಯೇ ಮನೆಯಲ್ಲಿ ಕಿತ್ತಳೆ ಹಣ್ಣುಗಳನ್ನು ಪೀಸ್ ಪೀಸ್ ಮಾಡಿ, ಸ್ಟವ್ ಮೇಲಿರುವ ಪಾತ್ರೆಗೆ ಹಾಕಿ ಅದರಲ್ಲಿ ವಿವಿಧ ವಸ್ತುಗಳನ್ನ ಹಾಕಿ ಮರ್ಮಾಲಡ್ ತಯಾರಿಸಿದ್ದಾರೆ. ನನ್ನ ಸಹೋದರಿ ಪ್ರಿಯಾಂಕ ಗಾಂಧಿಯವರು ಅಡುಗೆಯನ್ನು ಚೆನ್ನಾಗಿ ಮಾಡುತ್ತಾರೆ. ಅವರಿಂದಲೇ ನಾನು ಆರೆಂಜ್ ಮರ್ಮಾಲಡ್ ಮಾಡಲು ಕಲಿತಿರುವುದು. ಬೆಸ್ಟ್ ಕುಕ್ ಮಾಡುವುದರಲ್ಲಿ ಅಮ್ಮನೇ ಮೇಲುಗೈ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಮಾತನಾಡಿ, ನನ್ನ ಬಗ್ಗೆ ಹೆಚ್ಚಿನ ಜಾಗ್ರತೆಯನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಾರೆ. ನನಗೇನಾದರೂ ಹುಷಾರಿಲ್ಲ ಅಂದರೆ ಪ್ರಿಯಾಂಕ, ರಾಹುಲ್ ಇಬ್ಬರು ತುಂಬಾ ಕೇರ್ ಮಾಡ್ತಾರೆ. ವಿದೇಶಗಳಿಗೆ ಹೋದರೆ ಅಲ್ಲಿನ ಫುಡ್ ಅಡ್ಜಸ್ಟ್ ಆಗದ ಕಾರಣ, ಇಂಡಿಯನ್ ರೆಸ್ಟೋರೆಂಟ್ ಹುಡುಕಿ ಅಲ್ಲಿಗೆ ಹೋಗಿ ಊಟ ಮಾಡುತ್ತೇನೆ ಎಂದು ಹೇಳಿದ್ದಾರೆ.
Shri @RahulGandhi tries his hand at orange marmalade-making.
Watch Smt. Sonia ji and Rahul ji revisit their memories as they fill delightful jars of joy.
Full video here: https://t.co/nVPlYQ97yw pic.twitter.com/yE6yZRPKEV
— Congress (@INCIndia) December 31, 2023