ತುಳು ಸಿನಿಮಾ ರಂಗದಲ್ಲಿ ಮೆರೆದಿದ್ದ ನಟಿ ಲೀಲಾವತಿ

ಮಂಗಳೂರು: ಕನ್ನಡದ ಮೇರು ನಟಿಯಾದ ಲೀಲಾವತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಇವರು ಕಂಕನಾಡಿಯಲ್ಲಿರುವ ಸೈಂಟ್‌ ಜೋಸೆಫ್‌ ಎಲಿಮೆಂಟರಿ ಸ್ಕೂಲ್‌ನಲ್ಲಿ 2ನೇ ತರಗತಿ ವರೆಗೆ ಕಲಿತವರು. ಕಡು ಬಡತನದಲ್ಲಿ ಬೆಳೆದವರು.

ಹಲವಾರು ಕನ್ನಡ ಸಿನೆಮಾದಲ್ಲಿ ನಟಿಸಿದ ಇವರುತುಳು ಭಾಷಾ ಚಲನಚಿತ್ರದ ಆರಂಭಕ್ಕೆ ಲೀಲಾವತಿ ಅವರು ಮೊದಲು ಸಹಾಯಹಸ್ತ ಮಾಡಿದವರು. ತುಳುವಿನ “ದಾರೆದ ಬುಡೆದಿ’ಯಿಂದ ಆರಂಭವಾಗಿ ಹಲವು ತುಳು ಸಿನೆಮಾಗಳ ನಿರ್ಮಾಣಕ್ಕೆ ತನ್ನದೇ ಆದ ರೀತಿಯಲ್ಲಿ ಬೆಂಬಲ-ಸಹಾಯ ಕೊಟ್ಟಿದ್ದಾರೆ.

ತುಳು ಭಾಷೆಯ 2ನೇ ಸಿನೆಮಾ 1971ರಲ್ಲಿ ತೆರೆಕಂಡ “ದಾರೆದ ಬುಡೆದಿ’, 1972ರಲ್ಲಿ ತೆರೆಕಂಡ “ಪಗೆತ ಪುಗೆ’ ಹಾಗೂ ಬಿಸತ್ತಿ ಬಾಬು, 1973ರಲ್ಲಿ ತೆರೆಕಂಡ “ಯಾನ್‌ ಸನ್ಯಾಸಿ ಆಪೆ’, 1976ರಲ್ಲಿ ಬಂದ “ಸಾವಿರಡೊರ್ತಿ ಸಾವಿತ್ರಿ’, 1981ರಲ್ಲಿ “ಭಾಗ್ಯವಂತೆದಿ’, 1983ರಲ್ಲಿ “ಬದ್ಕೆರೆ ಬುಡ್ಲೆ’ ಹಾಗೂ 1984ರಲ್ಲಿ “ದಾರೆದ ಸೀರೆ’ ಸಿನೆಮಾಗಳಲ್ಲಿ ಅದ್ಬುತವಾಗಿ ಅಭಿನಯಿಸಿ ತನ್ನದೆ ಆದ ಛಾಪು ಅನ್ನು ಮೂಡಿಸಿದ್ದಾರೆ.

ಲೀಲಾವತಿ ಅವರು ಕರಾವಳಿಯಲ್ಲಿ ನಡೆದ ತುಳು ಭಾಷಾ ಕುರಿತಾದ ಕೆಲವು ಕಾರ್ಯಕ್ರಮ, ತುಳು ಸಿನೆಮಾ ಸಂಭ್ರಮದಲ್ಲಿ ಪಾಲ್ಗೊಳುತ್ತಿದ್ದರು. ಜೊತೆಗೆ ಕರಾವಳಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನವನ್ನು ಕೂಡಾ ಪಡೆದಿದ್ದಾರೆ.

Font Awesome Icons

Leave a Reply

Your email address will not be published. Required fields are marked *