ಮಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮತ್ತೆ ನಕ್ಸಲರ ಓಡಾಟ ಕಂಡುಬಂದಿದೆ. 5 ವರ್ಷಗಳ ಬಳಿಕ ಮತ್ತೆ ನಕ್ಸಲರು ಕರಾವಳಿಗೆ ಕಾಲಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕೊಲ್ಲೂರಿನಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು ಮಂಗಳೂರಿನ ಕಡಮಕಲ್ಲು ಬಳಿಯ ಕೋಜಿಮಲೆ ರಬ್ಬರ್ ಎಸ್ಟೇಟ್ ಬಳಿಯ ಅಂಗಡಿಯೊಂದಕ್ಕೆ ಬಂದು ದಿನಸಿ ಖರೀದಿಸಿ ಹೋಗಿದ್ದಾರೆ. ಈ ವೇಳೆ ಸ್ಥಳೀಯರಿಗೆ ಶಂಕೆ ವ್ಯಕ್ತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೂಡಲೆ ಪೋಲಿಸರು ಶೋಧ ನೆಡೆಸಿದ್ದಾರೆ. ಹಾಗೂ ಕೋಜಿಮಲೆ, ಕಡಮಕಲ್ಲು ಸ್ಥಳಗಳಲ್ಲಿ ಪೊಲೀಸ್ ಪಡೆ ಕಾವಲು ನಿಂತಿದೆ.
ಕಳೆದ ತಿಂಗಳು ಕೇರಳದಿಂದ ಬಂದ ನಕ್ಸಲರು ಉಡುಪಿಯ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಮ್ ಗೌಡ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಇನ್ನೂ ಕೇರಳದಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸಿಲ್ಲ ಎಂದು ಮೂಲ ಹೇಳಿದೆ