ದತ್ತ ಪೀಠದಲ್ಲಿದ್ದ ಗೋರಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಮರುಜೀವ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಗಿರಿಧಾಮದಲ್ಲಿರುವ ದತ್ತ ಪೀಠದಲ್ಲಿದ್ದ ಗೋರಿಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮರುಜೀವ ನೀಡಿದೆ.

2017ರ ಡಿಸೆಂಬರ್​ 3ರಂದು ದತ್ತಜಯಂತಿ ದಿನ ದರ್ಗಾದ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಆರೋಪವಿದೆ. ಆ ಕೇಸ್ ಗೆ ಈಗ ಮರುಜೀವ ನೀಡಿದೆ.

7 ವರ್ಷದ ಬಳಿಕ  ದತ್ತಪೀಠ ಹೋರಾಟಗಾರರ ಮೇಲಿದ್ದ ಹಳೇ ಕೇಸ್ ಅನ್ನು ರಾಜ್ಯ ಸರ್ಕಾರ ರೀ ಓಪನ್ ಮಾಡಿಸಿದೆ. ಗಮನಾರ್ಹವೆಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕೇಸ್​​ ಕ್ಲೋಸ್ ಆಗಿತ್ತು.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 143,447,427, 298,504,506,114,353, ಕೇಸ್ ದಾಖಲಾಗಿತ್ತು.

ಭಜರಂಗದಳದ ಒಟ್ಟು 14 ಕಾರ್ಯಕರ್ತರ ಮೇಲೆ ಈ ಪ್ರಕರಣ ದಾಖಲಾಗಿದ್ದು, ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಅವರು ಆರೋಪಿಗಳಾಗಿದ್ದಾರೆ.

ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

Font Awesome Icons

Leave a Reply

Your email address will not be published. Required fields are marked *