ದರ್ಶನ್ ನಟನೆಯ ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ

 

ಬೆಂಗಳೂರು: ದರ್ಶನ್ ನಟನೆಯ ‘ಕಾಟೇರ ಸಿನಿಮಾ ತನ್ನ ಹೆಸರು, ಪೋಸ್ಟರ್​ನಿಂದ ಈಗಾಗಲೇ ಗಮನ ಸೆಳೆದಿದೆ. ಇದೀಗ ಸಿನಿಮಾದ ಬಿಡುಗಡೆಯನ್ನೂ ಘೋಷಣೆ ಮಾಡಲಾಗಿದ್ದು, ದರ್ಶನ್, ದೊಡ್ಡ-ದೊಡ್ಡ ಸ್ಟಾರ್ ನಟರ ಎದುರು ಅಖಾಡಕ್ಕೆ ಇಳಿದಿದ್ದಾರೆ. ಕಾಟೇರ ಸಿನಿಮಾದ ಸಣ್ಣ ಟೀಸರ್ ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ.

‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ತೆರೆಗೆ ಬರಲಿದೆ. ಡಿಸೆಂಬರ್ ತಿಂಗಳಲ್ಲಿ ಬಾಲಿವುಡ್​ನ ಹಾಗೂ ದಕ್ಷಿಣ ಭಾರತದ ಕೆಲವು ದೊಡ್ಡ ಸ್ಟಾರ್​ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರ ನಡುವೆ ದರ್ಶನ್ ಸಿನಿಮಾ ಬಿಡುಗಡೆ ಆಗುತ್ತಿದೆ.

ಡಿಸೆಂಬರ್ ತಿಂಗಳ 22 ರಂದು ಹೊಂಬಾಳೆ ಫಿಲಮ್ಸ್ ನಿರ್ಮಿಸಿ, ಪ್ರಭಾಸ್ ನಟಿಸಿರುವ ‘ಸಲಾರ್’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಹಿಂದೆಯೇ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ತೆರೆಗೆ ಬರಲಿದೆ.

‘ಕಾಟೇರ’ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ. ಇದು ಇವರ ಮೊದಲ ಸಿನಿಮಾ. ಸಿನಿಮಾಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ

Also Read : Garlic Bread Recipe बिलकुल कैफ़े स्टाइल में इमेज के साथ

Font Awesome Icons

Leave a Reply

Your email address will not be published. Required fields are marked *