ದಿ ಕೇರಳ ಸ್ಟೋರಿಯಂತೆ ವಿವಾದದ ಸುಳಿಯಲ್ಲಿದೆ ಬಸ್ತರ್

ಸುದೀಪ್ತೋ ಸೇನ್  ಮತ್ತು ಅದಾ ಶರ್ಮಾ ಜೋಡಿ ಈ ಮೊದಲು ದಿ ಕೇರಳ ಸ್ಟೋರಿ ಮೂಲಕ ಸಂಚಲನ ಸೃಷ್ಟಿ ಮಾಡಿದ್ದರು, ಇದೀಗ ಬಸ್ತರ್ ಹೆಸರಿನ ಮತ್ತೊಂದು ಸಿನಿಮಾ ಮಾಡಿ ಅದನ್ನು ರಿಲೀಸ್ ಕೂಡ ಮಾಡಿದ್ದು, ಈ ಸಿನಿಮಾ ಕೂಡ ದಿ ಕೇರಳ ಸ್ಟೋರಿ ಅಂತೆ ವಿವಾದಕ್ಕೆ ಕಾರಣವಾಗಿದೆ.

ಬಸ್ತರ್ ನಕ್ಸಲೈಟ್ ಕುರಿತಾದ ಸಿನಿಮಾವಾಗಿದ್ದು, ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಚಿತ್ರತಂಡ ತಿಳಿಸಿತ್ತು. ಆ ಸತ್ಯವನ್ನೂ ಸಿನಿಮಾದಲ್ಲಿ ಹೇಳಲಾಗಿದೆ. ಇದೇ ವಿವಾದಕ್ಕೆ ಕಾರಣವಾಗಿದೆ.

ಭಾರತೀಯ ಸೈನಿಕರನ್ನು ನಕ್ಸಲ್ ರು ಹೇಗೆ ಹತ್ಯೆ ಮಾಡಿದರು ಎನ್ನುವುದನ್ನು ಸಿನಿಮಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಇದೇ ಆಕ್ರೋಶಕ್ಕೆ ಕಾರಣವಾಗಿದೆ. ಅನಗತ್ಯ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವು ಕಡೆ ಸಿನಿಮಾ ಪ್ರದರ್ಶನವನ್ನೂ ನಿಲ್ಲಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *