ದೀಪಿಕಾ ಪಡುಕೋಣೆಯಿಂದಾಗಿ ಸಖತ್ ವೈರಲ್ ಆಗುತ್ತಿದೆ “ಎಮಾ ದಟ್ಶಿ”

ದೆಹಲಿ: ಇದೀಗ ನೆರೆಯ ಭೂತಾನ್ ದೇಶದ ರಾಷ್ಟ್ರೀಯ ಆಹಾರ ಖಾದ್ಯ ದೀಪಿಕಾ ಪಡುಕೋಣೆಯಿಂದಾಗಿ ಸಖತ್ ವೈರಲ್ ಆಗುತ್ತಿದೆ. ಪರೋಕ್ಷವಾಗಿ ಭೂತಾನ್​ರ ಆಹಾರ ಖಾದ್ಯಕ್ಕೆ ಸಖತ್ ಪ್ರಚಾರ ನೀಡಿದ್ದಾರೆ.

ಇದೀಗ ಕೆಲವು ದಿನಗಳ ಹಿಂದೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಮತ್ತೆ ಭೂತಾನ್​ ಬಗ್ಗೆ ಅಲ್ಲಿನ ಒಂದು ಆಹಾರ ಖಾದ್ಯದ ಬಗ್ಗೆ ಮಾತನಾಡಿದ್ದಾರೆ.

ತಮಗೆ ಭೂತಾನ್​ನ “ಎಮಾ ದಟ್ಶಿ” ಎಂದರೆ ಬಹಳ ಇಷ್ಟವೆಂದು, ಆ ಖಾದ್ಯ ನನ್ನ ಮನಸ್ಸು ಗೆದ್ದು ಬಿಟ್ಟಿದೆ ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ. ಎಮಾ ಎಂದರೆ ಭೂತಾನ್​ನಲ್ಲಿ ಮೆಣಸಿನಕಾಯಿ, ದಾಟ್ಶಿ ಎಂದರೆ ಚೀಸ್ ಎಂದರ್ಥ.

ಇಷ್ಟು ಹೇಳಿದ್ದೆ ತಡ ದೀಪಿಕಾ ಅಭಿಮಾನಿಗಳು, ಭಾರತದ ಆಹಾರ ಪ್ರಿಯರು ಏನದು ‘ಎಮಾ ದಟ್ಶಿ’ ಎಂದು ಹುಡುಕಾಟ ಆರಂಭ ಮಾಡಿದ್ದು ಮಾತ್ರವಲ್ಲದೆ ಮನೆಗಳಲ್ಲಿ ಎಮಾ ದಟ್ಶಿಯನ್ನು ತಯಾರಿಸಿ ಅದರ ವಿಡಿಯೋಗಳನ್ನು ಇನ್​ಸ್ಟಾಗ್ರಾಂ ರೀಲ್ಸ್​ಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದಾರೆ.

2023ರ ಏಪ್ರಿಲ್ ತಿಂಗಳಲ್ಲಿ ದೀಪಿಕಾ ಪಡುಕೋಣೆ ಭೂತಾನ್​ಗೆ ಹೋಗಿದ್ದರು. ಅಲ್ಲಿನ ಕೆಲವು ಚಿತ್ರಗಳನ್ನು ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭೂತಾನ್​ನ ಕೆಲವು ಆಹಾರ ಖಾದ್ಯಗಳ ಚಿತ್ರಗಳನ್ನೂ ಸಹ ಅವರು ಆಗ ಹಂಚಿಕೊಂಡಿದ್ದರು.

ಈ ಖಾದ್ಯವನ್ನು ತಯಾರಿಸುವುದು ಬಹಳ ಸರಳ, ಸಾಕಷ್ಟು ಮೆಣಸಿನಕಾಯಿಗಳನ್ನು ತೆಗೆದುಕೊಳ್ಳಬೇಕು, ಅವನ್ನು ಉದ್ದುದ್ದ ಸೀಳಬೇಕು, ಒಂದು ಈರುಳ್ಳಿ, ಅರ್ಧ ಟಮೆಟೋ, ಕೆಲವು ಬೆಳ್ಳುಳ್ಳಿಯನ್ನು ಹೆಚ್ಚಿ ಒಟ್ಟಿಗೆ ಎಣ್ಣೆಯಲ್ಲಿ ಹುರಿದು ಬಳಿಕ ಅದಕ್ಕೆ ನೀರು ಹಾಕಿ ಕೆಲ ಕಾಲ ಸಣ್ಣನೆ ಉರಿಯಲ್ಲಿ ಕುದಿಸಬೇಕು. ಬಳಿಕ ಅದಕ್ಕೆ ಬೆಣ್ಣೆ ತುಸು ಹಾಕಿ, ಆ ಬಳಿಕ ಚೀಸ್ ಅನ್ನು ಹಾಕಿ ಚೆನ್ನಾಗಿ ಕಲಸಿದರೆ  ‘ಎಮಾ ದಟ್ಶಿ’ ರೆಡಿ.
Font Awesome Icons

Leave a Reply

Your email address will not be published. Required fields are marked *