ದುಬೈನ ಮೊಟ್ಟ ಮೊದಲ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆಯಿಂದ “ದುಬೈ ಡ್ಯಾನ್ಸ್ ಕಪ್ -2024” ಆಯೋಜನೆ

ದುಬೈ: 1985 ರಲ್ಲಿ ಆರಂಭವಾದ ದುಬೈನ ಮೊಟ್ಟ ಮೊದಲ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಕರ್ನಾಟಕ ಸಂಘ ದುಬೈ ಆಯೋಜನೆಯ “ದುಬೈ ಡ್ಯಾನ್ಸ್ ಕಪ್ -2024”ರ ಸಮಾರಂಭ ಅದ್ಧೂರಿಯಾಗಿ ಮೇ 26ರ ರಂದು ನಡೆಯಲಿದೆ.

ಕರ್ನಾಟಕ ಸಂಘ ದುಬೈ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಡಿಡಿಸಿ ಕನ್ನಡ ಭಾಷೆ ಮತ್ತು ನೃತ್ಯ ಕಲೆಯನ್ನು ಉತ್ತೇಜಿಸುವ ವಾರ್ಷಿಕ ಕಾರ್ಯಕ್ರಮ ಇದಾಗಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿವಾಸಿ ಕನ್ನಡಿಗರಿಗೆ ಮಾನ್ಯತೆ ಮತ್ತು ಖ್ಯಾತಿಯನ್ನು ನೀಡುತ್ತದೆ. ಈ ಬಹುನಿರೀಕ್ಷಿತ ಡಿಡಿಸಿ -2024 ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಯುಎಇಯ ನೃತ್ಯ ತಂಡಗಳು 2024ರ ಏಪ್ರಿಲ್ 15 ರೊಳಗೆ ಸಂಘದ ಈ ಕೆಳಗಿನ ಯಾವುದೇ ಕಾರ್ಯನಿರ್ವಾಹಕರನ್ನು ಸಂಪರ್ಕಿಸುವ ಮೂಲಕ ಮೂಲಕ ತಮ್ಮ ತಂಡಗಳನ್ನು ನೋಂದಾಯಿಸಲು ತಿಳಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ 055 548 5003, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ 050 243 3263, ಮನರಂಜನಾ ಕಾರ್ಯದರ್ಶಿ ಶ್ರೀಮತಿ ರಾಧಿಕಾ ಸತೀಶ್ 056 760 3132 ಮತ್ತು ಯುವರಾಜ್ ದೇವಾಡಿಗ 055 667 7249 ತಂಡದ ನೋಂದಣಿ ಮತ್ತು ಸಾರ್ವಜನಿಕರಿಗೆ ಆರಂಭಿಕ ಸಂಪರ್ಕದ ಉಸ್ತುವಾರಿ ವಹಿಸಲಿದ್ದಾರೆ. ಖಜಾಂಚಿ ಶ್ರೀ ನಾಗರಾಜ್ ರಾವ್ ಉಡುಪಿ 055 551 5485 ಪ್ರಾಯೋಜಕತ್ವ ಮತ್ತು ಪ್ರಚಾರದ ಉಸ್ತುವಾರಿ ವಹಿಸಲಿದ್ದಾರೆ.

ಇನ್ನು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮಾತನಾಡಿ, “ಡಿಡಿಸಿ-2024 ನೃತ್ಯ ತಂಡಗಳಿಗೆ ಸೆಲೆಬ್ರಿಟಿ ತೀರ್ಪುಗಾರರು ಮತ್ತು ಸಾವಿರಾರು ನೃತ್ಯ ಪ್ರಿಯ ಪ್ರೇಕ್ಷಕರ ಸಮ್ಮುಖದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದ್ಭುತ ವೇದಿಕೆಯಾಗಿದೆ ಎಂದರು. ಉಪಾಧ್ಯಕ್ಷ ದಯಾ ಕಿರೋಡಿಯನ್ ಮಾತನಾಡಿ, “ಡಿಡಿಸಿ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸೆಲೆಬ್ರಿಟಿಗಳು ಮತ್ತು ಪ್ರಸಿದ್ಧ ನೃತ್ಯ ಸಂಯೋಜಕರನ್ನು ಕರೆತರುವ ಗ್ಲಿಟ್ಜ್ ಮತ್ತು ಗ್ಲಾಮರ್ ಹೊಂದಿರುವ ಒಂದು ರೀತಿಯ ಕಾರ್ಯಕ್ರಮವಾಗಿದೆ” ಎಂದು ಹೇಳಿದರು.

ಕರ್ನಾಟಕ ಸಂಘ ದುಬೈನ ಪೋಷಕ ಡಾ.ಬಿ.ಕೆ.ಯೂಸುಫ್, ಹರೀಶ್ ಬಂಗೇರ, ರೊನಾಲ್ಡ್ ಮ್ಯಾಟಿಸ್ ಸಲಹೆಗಾರ ಜಯಂತ್ ಶೆಟ್ಟಿ, ಕೆಎಸ್ ಡಿ ಕಾರ್ಯಕಾರಿ ಸಮಿತಿ ಹಾಗೂ ಯು.ಎ.ಇ.ಯ ಕರ್ನಾಟಕ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ದುಬೈ ಡ್ಯಾನ್ಸ್ ಕಪ್ 2024 – ಸ್ಪರ್ಧೆಯ ವಿವರಗಳು:
ದಿನಾಂಕ : 26ನೇ ಮೇ 2024
ನೃತ್ಯ ವಿಭಾಗ ಹೀಗಿದೆ:
> ಜಾನಪದ ನೃತ್ಯ : ಎಲ್ಲಾ ವಯಸ್ಸಿನವರು
> ಸಿನಿಮೀಯ ನೃತ್ಯ : ಸೆನಿರ್ & ಜೂನಿಯರ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 055 548 5003 / 050 243 3263 / 056 760 3132

> ಯು.ಎ.ಇ.ಯಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ಕನ್ನಡ ಭಾಷೆಯಲ್ಲಿ ಮಾತ್ರ ನೃತ್ಯಕ್ಕೆ ಅವಕಾಶವಿರುತ್ತದೆ.

Font Awesome Icons

Leave a Reply

Your email address will not be published. Required fields are marked *