ದೆಹಲಿ ಪೊಲೀಸ್‌ ವೆಬ್‌ಸೈಟ್ ಗಳನ್ನೇ ಹ್ಯಾಕ್ ಮಾಡಿದ ಕಿಡಿಗೇಡಿಗಳು

ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ಪೊಲೀಸ್‌ ವೆಬ್‌ಸೈಟ್‌ ಗಳನ್ನು ಗುರುವಾರ ಕಿಡಿಗೇಡಿಗಳು ಹ್ಯಾಕ್‌ ಮಾಡಿರುವ ಘಟನೆ ನಡೆದಿದೆ.ದೆಹಲಿ ಪೊಲೀಸ್ ಮತ್ತು ದೆಹಲಿ ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ಗಳನ್ನು ಹ್ಯಾಕರ್‌ಗಳ ಗುಂಪು ಹ್ಯಾಕ್ ಮಾಡಿ ಅಕ್ರಮ ಪ್ರವೇಶ ಪಡೆದಿದೆ.ಈ ಸಂಬಂಧ ದೆಹಲಿ ಪೊಲೀಸರು ದತ್ತಾಂಶ ರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಹ್ಯಾಕರ್‌ಗಳ ಕುರಿತು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ,ಕಿಲ್‌ಸೆಕ್‌ (KillSec) ಎಂಬ ಹ್ಯಾಕರ್‌ಗಳ ಗುಂಪು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದು, ಅದರ ಮೂಲಕ ದೆಹಲಿ ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ಗೆ ಪ್ರವೇಶವನ್ನು ಪಡೆದು ಹ್ಯಾಕ್ ಮಾಡಿವೆ. ಅಲ್ಲದೆ ವಿವಿಧ ಪ್ರಕರಣಗಳಲ್ಲಿ ವ್ಯಕ್ತಿಗಳಿಗೆ ನೀಡಲಾದ ಚಲನ್‌ಗಳ ಸ್ಥಿತಿಯನ್ನು “ಪಾವತಿಸಿದ” ಸ್ಥಿತಿಗೆ ಬದಲಾಯಿಸಲು ಪ್ರಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹ್ಯಾಕ್‌ ಮಾಡುವುದಲ್ಲದೇ ಪೊಲೀಸ್‌ ತಂಡಕ್ಕೆ ಸವಾಲ್‌ ಹಾಕಿದೆ.ಯಾರು ಯಾರು ದಂಡ ಪಾವತಿಸಬೇಕೋ ಅವರು ತಮ್ಮ ತಮ್ಮ ಚಲನ್ ಗಳ ಮಾಹಿತಿ ನೀಡಿದರೆ ಅದನ್ನು “ಪಾವತಿಸಿದ” ಸ್ಥಿತಿಗೆ ಬದಲಾಯಿಸಲಾಗುತ್ತದೆ ಎಂದು ಹ್ಯಾಕರ್ ಗಳ ತಂಡ ಓಪನ್ ಆಫರ್ ಕೂಡ ನೀಡಿದೆ. ಮತ್ತೊಂದು ಸಂದೇಶದಲ್ಲಿ, ಹ್ಯಾಕರ್ ಗಳ ಗುಂಪು ದೆಹಲಿ ಪೊಲೀಸ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ, ಫೋಟೋಗಳನ್ನು ಹೊರತು ಪಡಿಸಿ ಎಲ್ಲಾ ಡೇಟಾವನ್ನು ಕದ್ದಿರುವುದಾಗಿ ಹೇಳಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇದರ ಖಚಿತ ಮಾಹಿತಿಗೆ ತನಿಖೆ ನಡೆಸಲಾಗುತ್ತಿದೆ.

Font Awesome Icons

Leave a Reply

Your email address will not be published. Required fields are marked *